30 November, 2022

ಕರುಣಿಸು...

ಕರುಣಿಸು ಓ ಮನಸೇ
ಒಂದಷ್ಟು ನಗುವನ್ನು,
ಬದುಕಿಲ್ಲಿ ಬರಡಾಗಿದೆ
ಭರವಸೆಯಾ ಮರೆತು...

ಕರುಣಿಸು ಓ ಮನಸೇ
ಒಂದಷ್ಟು ಕನಸುಗಳ,
ಒಲವಿಲ್ಲಿ ಬರಿದಾಗಿದೆ
ಭಾವಗಳ ಮೊರೆತವಿಲ್ಲದೇ...

ಕರುಣಿಸು ಓ ಬದುಕೇ
ಒಂದಷ್ಟೂ ಛಲವನ್ನು,
ಎಡವಿ ಬಿದ್ದರೂ ಇಲ್ಲಿ
ಎದ್ದು ನಿಲ್ಲುವ ಬಲವನ್ನು...

ಕರುಣಿಸು ಓ ಬದುಕೇ
ಒಂದಷ್ಟು ಕಣ್ಣೀರನು,
ನೋವುಗಳ ಬೇಗೆಯಲಿ ಮನಸು 
ತಣಿಯಲಿ ಒಂದಷ್ಟು ಹೊತ್ತು...

No comments:

Post a Comment