ತೇಲಿ ಬಿಡುವೆ ನಗುವ ಮುಗಿಲಾ
ಮನದ ಈ ಆಗಸದೊಳಗೆ,
ಮರೆತು ಬಿಡಲು ಈ ಜೀವವಿಲ್ಲಿ
ನೂರು ನೆನಪ ನೋವನು...
ಅರೆದು ಕುಡಿವೆ ಮನದ ನೋವ
ಬದುಕ ಬನದ ಕತ್ತಲಲ್ಲಿ,
ಕನಸುಗಳ ಕನವರಿಸಲಿ ಜೀವವಿಲ್ಲಿ
ಮತ್ತೆ ಕುಶಿಯನು ಹುಡುಕುತಾ...
ಹಾರಿಬಿಡುವೆ ಪ್ರೀತಿ ಪಾರಿವಾಳ
ಬದುಕ ಬಯಲಿನ ಪಯಣದೇ,
ಸ್ನೇಹವನ್ನು ಅರಸಿ ಆರಿಸಿ
ಜೀವವಿಲ್ಲಿ ತಂಪಾಗಿ ಕುಣಿಯಲಿ...
ಕಾಲವೆಂಬ ಮಾಯಮೃಗಕೆ
ನಾಳೆಯೆಂಬ ಕಂಬಳಿ ಹೊದಿಸಿ,
ಆಸೆಗಳ ಮೂಟೆ ಕಟ್ಟಿಕೊಂಡು
ಬದುಕ ಇಲ್ಲಿ ಸಂಭ್ರಮಿಸಲಿ...
No comments:
Post a Comment