13 July, 2023

ಬೆಳಕೆಂಬ ಬೆರಗು...

ಕತ್ತಲೆಯೊಳಗೂ ಬೆಳಕಿದೆ
ಬೆಳಕಿನಾಳದಿ ಕತ್ತಲೆಯು ಅಡಗಿದೆ,
ಆ ಬೆರಗನು ಮನಸೀಗ ಹುಡುಕಿದೆ
ಕತ್ತಲು ಬೆಳಕಿನ ಆಟದಿ ಬದುಕು ಮರೆತಿದೆ...

ಉಸಿರೊಳಗೆ ಜೀವವಿಲ್ಲಿ ಬದುಕಿದೆ
ದೇಹದೊಳಗೆ ಉಸಿರು ತಾ ಆಡಿದೆ,
ಮೂಳೆ ಮಾಂಸದ ಬಂಧಕೆ ಬದುಕು ಮೂಕವಿಸ್ಮಿತವಾಗಿದೆ
ಸೃಷ್ಟಿಯ ವಿಚಿತ್ರಕೆ ಜಗವು ಸಾಕ್ಷಿಯಾಗಿದೆ...

ನೀರೊಳಗೆ ಗಾಳಿ ಸೇರಿ ಸಾಗರವಾಗಿದೆ
ಅಲೆಗಳಾಗಿ ಮಾರುತವಾಗಿ ರೌದ್ರತೆಯ ಮೆರೆದಿದೆ,
ಗಾಳಿಯೊಳಗೆ ನೀರು ಸೇರಿ ಮೋಡವಿಲ್ಲಿ ಕಟ್ಟಿದೆ
ಗುಡುಗು ಸಿಡಿಲಾಗಿ ಮಳೆಯಿಲ್ಲಿ ಸುರಿದಿದೆ...

ಆತ್ಮಕ್ಕೂ ದೇಹಕ್ಕೂ ಕರ್ಮದ ನಂಟಿದೆ
ಕರ್ಮಕ್ಕೂ ಇಲ್ಲಿ ವಿಧಿಯೆಂಬ ಗಂಟಿದೆ,
ಪ್ರತಿ ಪಯಣಕ್ಕೂ ನಾಳೆಯೆಂಬ ಗಮ್ಯವಿದೆ
ಆತ್ಮದ ಪಯಣಕ್ಕೆ ಪುನರ್ಜನ್ಮದ ಗುರಿಯಿದೆ...

No comments:

Post a Comment