15 November, 2023

ಮಂಜಿನ ಹನಿ...

ಮನಸಿನ ಕಸವನು ಶುಚಿಗೊಳಿಸೋ
ಓ ಮೌನವೇ ಒಮ್ಮೆ ಮಾತಾಡು,
ಸಾವಿರ ಪ್ರಶ್ನೆಗಳಿಗೆ ಉತ್ತರವೂ
ನಿನ್ನಯ ಮರೆಯಲಿ ಅಡಗಿಹುದು...

ಕನಸನು ಹೆಣೆಯುವ ಭಾವಗಳೇ
ಮುಗಿಲಾಗಿ ಮನದ ಬಾಂದಳದಿ,
ಎದೆಯ ತುಂಬಿದ ಓ ನೆನಪುಗಳೇ
ಕುಶಿಯ ಮಳೆ ಸುರಿಸಿ ಬದುಕಿನಲಿ...

ಬದುಕಿನ ಪಯಣದ ಹಾದಿಯಲಿ
ಕಾಣದ ತಿರುವುಗಳು ನೂರಾರು,
ಅರಿವಿನ ಮರೆವಿನ ಜೊತೆಯಲ್ಲೇ
ಬದುಕಿನ ಓಟ ಸಾಗುವುದು...

ಕರಗುವುದು ಮರುಗುವುದು ಸಹಜ
ಮನಸು ಬದುಕಿನ ಹಾದಿಯಲಿ,
ಮಂಜಾಗಿ ಮಳೆ ಹನಿಯಾಗಿ
ಸುರಿಯಬೇಕು ಬೆರೆಯಬೇಕು ಈ ಬದುಕಿಲ್ಲಿ...

No comments:

Post a Comment