29 November, 2023

ಕೌತುಕ...

ಬದುಕಿಗೆ ಬಣ್ಣವ ತುಂಬುವ ಹಂಬಲ
ಕನಸಿಗೆ ರೆಕ್ಕೆಯಾ ಜೋಡಿಸೊ ಹಂಬಲ,
ಮನಸಿಗೆ ಮಾತ್ರವೇ ಒಲವಿನ ಕಾತರ
ಅರಳುವ ಭಾವಗಳಿಗೂ ಇಲ್ಲಿದೆ ಆತುರ...

ನಗುವಿಗೆ ಇಲ್ಲಿ ಕುಶಿಯ ಕಾತುರ
ಕಾಲ ಚಕ್ರಕೆ ಇಲ್ಲಿ ಓಡುವ ಆತುರ,
ಮನಸಿಗೆ ಮಾತ್ರ ನಿನ್ನೆಯ ಹಂಬಲ
ಬದುಕು ಮಾತ್ರ ನಿತ್ಯದ ಕೌತುಕ...

ಆತುರ ಕಾತುರ ಕೌತುಕದೊಳಗೆ
ಮೂರು ದಿನಗಳ ಪಯಣದ ಹಂಬಲ,
ನೆನಪಿನ ಮಡಿಲಿಂದ ಜಾರಿಬೀಳುವಾ
ಪ್ರತಿ ಕ್ಷಣಕೂ ಮತ್ತೆ ಜೀವಿಸೋ ಹಂಬಲ...

ನೋವಿಗೂ ಇಲ್ಲಿ ವೈರಾಗ್ಯದ ಹಂಬಲ
ದೇಹಕ್ಕಿಲ್ಲಿ ನೋವ ಮರೆವ ಆತುರ,
ಆತ್ಮಕ್ಕಿಲ್ಲಿ ಆಧ್ಯಾತ್ಮದ ಕಾತುರ
ಕಣ್ಣರಳಿಸಿ ನೋಡೆ ಈ ಸೃಷ್ಟಿಯೇ ಕೌತುಕ...

No comments:

Post a Comment