17 December, 2023

ಮನಸೇ...

ಜಗವ ಮರೆಯುವೆ ಮನಸೇ ನಾನು
ಕನಸು ಕುಣಿಸಲು ನಿನ್ನನೇ,
ಮೆರೆಸಿ ನೋಡು ಭಾವಗಳ ಮೇರು
ನವಿಲಾಗಿ ಕುಣಿವುದು ಹೃದಯವೂ...

ಲೋಕದ ಜಾತ್ರೆಯೊಳು ನಿನ್ನ ತೇರು
ಭರವಸೆಯ ಬೆಳಕಿನಲಿ ಸಾಗುತಿರಲು,
ಚಿಂತೆಯಾ ಮೋಡವಿಲ್ಲಿ ಕವಿಯಬಹುದೇ
ಭಾವಗಳ ಭಾರಕೆ ಬಾಗಬಹುದೇ...

ಕ್ಷಮಿಸಿಬಿಡು ಒಮ್ಮೆ ಮನಸೇ
ಕೊರೆವ ಸಾಲು ನೆನಪುಗಳಿಗೆ,
ಬೆರೆತುಬಿಡು ಎಂದೂ ಬೇರೆಯಾಗದಂತೆ
ಉಸಿರು ದೇಹದೊಳು ಬಂಧಿಯಾಗಿರುವವರೆಗೆ...

ಮನಸಾರೆ ಒಮ್ಮೆ ನಗಬೇಕು ಕೇಳು
ತುಂಟತನದಿ ನಿನ್ನ ಪೆಚ್ಚು ಮೋರೆಯ ಕಂಡು,
ಇರಬೇಕು ಇಲ್ಲಿ ಏನು ಅರಿಯದಂತೆ
ಮಡಿಲಲ್ಲಿ ಆಡೋ ಪುಟ್ಟ ಕಂದನಂತೆ...

No comments:

Post a Comment