06 November, 2012

ನನ್ನವಳು



ಮುಗಿಲ ಮಗಳಿವಳು,
ನಗುವ ಮಲ್ಲಿಗೆಯೂ...

ಬೆಳದಿಂಗಳ ಬಾಲೆಯಿವಳು,
ಚಂದಿರನ ಬಿಂಬವೂ...

ಧರೆಗಿಳಿದ ಅಪ್ಸರೆಯಿವಳು,
ನನ್ನ ಮನದನ್ನೆಯೂ...

ಕಿನ್ನರ ಲೋಕದ ಕಿನ್ನರಿಯಿವಳು,
ನನ್ನ ಕನಸಿಗೆ ರಾಯಭಾರಿಯೂ...

ಪ್ರೇಮದೂರಿನ ಒಡತಿಯಿವಳು,
ಮನಸ ಸೆಳೆದ ಮಾಯೆಯೂ...

ಶೃಂಗಾರ ರಸದ ಕಡಲಿವಳು,
ಪ್ರೀತಿಧಾರೆಯೆರೆವ ಕನ್ನಿಕೆಯೂ...

ಪದಗಳಲಿ ಪದವಾಗಿ ಕುಳಿತ ನೀರೆಯಿವಳು,
ಜನುಮ ಜನುಮದ ಅನುಬಂಧವೂ.

No comments:

Post a Comment