06 November, 2012

ಪ್ರೀತಿಯ ಹುಡುಗಿಗೆ...



ಪ್ರತಿ ಪ್ರೀತಿಗೂ ಒಂದು ಸ್ಪೂರ್ತಿಯಿದೆ ಹುಡುಗಿ,
ಒಲವ ಬಣ್ಣಿಸಲು ಪದಗಳ ಕೊರತೆಯೆಲ್ಲಿದೆ ಇಲ್ಲಿ?
ಷಹಜಾನನ ತಾಜ್ ಮಹಲ್ ನಾ ಕಟ್ಟಲಾರೆ,
ಗೋರಿಯೊಳಗಿನ ಮುಮ್ತಾಜ್ ನೀನಾಗದಿರು ಎಂದೂ.
ಪ್ರೀತಿಯಲಿ ರೋಮಿಯೋ ನಾನಾಗಲಾರೆ,
ಜೂಲಿಯೆಟ್ ನೀನಾಗಬೇಡ ಗೆಳತಿ.
ಪ್ರೇಮಿ ನಾನು,ಸಲಿಂ ಅಂತು ಅಲ್ಲವೇ ಅಲ್ಲ,
ಅನಾರ್ಕಲಿ ನೀನಾಗಬೇಕೆಂಬ ಆಸೆಯಂತೂ ಇಲ್ಲವೇ ಇಲ್ಲ.
ದೇವದಾಸನ ಪ್ರೀತಿಯಂತು ನನ್ನದಲ್ಲ,
ಚಂದ್ರನ ತಂದಿಡುವ ಪೊಳ್ಳು ಆಣೆಯಂತು ಇಲ್ಲವೇ ಇಲ್ಲ.
ಅಪ್ಪಟ ಮನಸಿನ ಸ್ವಚ್ಚ ಪ್ರೀತಿಯಿದು,
ಆಣೆಗಳ ಮಾತಾಡಿ ಮನಸ ಕಟ್ಟಿ ಹಾಕಲಾರೆ ಹುಡುಗಿ.
ಹಂಗಿನರಮನೆಯಲ್ಲ ಇದು ಪ್ರೀತಿಯರಮನೆ,
ಬಲಗಾಲಿಟ್ಟು ಬರಲೇಬೇಕು ನೀನು ಈ ಪ್ರೀತಿಯರಮನೆಗೆ ನನ್ನ ಮನದೊಡತಿಯಾಗಿ,
ಈ ಪ್ರೀತಿಯ ಗುಡಿಗೆ ದೇವತೆಯಾಗಿ...


No comments:

Post a Comment