29 April, 2013

ಮರುಕಳಿಸದಿರು ಮರೆವೇ...



ಮರುಕಳಿಸದಿರು ಮರೆವೇ
ನನ್ನ ಒಲವ ಯಾತ್ರೆಯೊಳಗೆ,
ಕನಸೊಂದು ಶುರುವಾಗಿದೆ
ಈಗ ತಾನೇ.

ಒಳಗಾಗದಿರಲಿ ಬದುಕು
ನಿನ್ನ ಅವಕೃಪೆಗೆ,
ಕರಗದಿರಲಿ ಕನಸು
ಪ್ರೀತಿ ಕೈ ಸೇರುವ ಮುನ್ನ.

ಭಾವ ರಿಂಗಣದೊಳು
ಮೊಳಗದಿರಲಿ ನಿನ್ನ
ಅಪಶ್ರುತಿಯು,
ಬದುಕೆಂಬ ಹಡಗು
ಮುಳುಗದಿರಲಿ ಈ ಪ್ರೀತಿ
ಯಾತ್ರೆಯಲಿ.

ಕರುಣೆಯಿರಲಿ ಬದುಕೇ
ಈ ಪ್ರೇಮಿಯ ಮೇಲೆ,
ಕನಸುಗಾರನ ಮೇಲೆ
ನಿನಗೇಕೆ ಮುನಿಸೇ.

ವರವಾಗು ಮರೆವೇ ಈ
ಪ್ರೇಮಿಗಾಗಿ,
ಹರಸು ನಿತ್ಯವೂ ಹೊಸ
ಕನಸಿಗಾಗಿ.

4 comments:

  1. ತುಂಬಾ ಸೊಗಸಾಗಿದೆ, ಮತ್ತೆಮತ್ತೆ ನೆನಪಾಗಿಸುತ್ತೆ.

    ReplyDelete
  2. ಕರುಣಾಳು ಬಾ ಬೆಳಕೆ.... ಎನಿಸಿತು ನಿಮ್ಮ ಈ ಕವನದ ಹೂರಣ.

    "ಒಳಗಾಗದಿರಲಿ ಬದುಕು
    ನಿನ್ನ ಅವಕೃಪೆಗೆ,
    ಕರಗದಿರಲಿ ಕನಸು
    ಪ್ರೀತಿ ಕೈ ಸೇರುವ ಮುನ್ನ."

    ಇದು ನಮ್ಮದೂ ಪಾಡು.

    http://www.badari-poems.blogspot.in/

    ReplyDelete