ನನ್ನೊಳಗಿನ ನಿನಗೆ...
ನಿನ್ನ
ನೆನಪುಗಳು
ಯಾಕೋ
ದುಬಾರಿಯಾಗಿವೆ
ಇತ್ತೀಚೆಗೆ,
ಪ್ರತಿ ಇರುಳಲು
ನಿದ್ದೆಯ
ಮರೆತು
ಬೆಲೆ ತೆರಬೇಕಾಗಿದೆ
ನಾನು.
**********
ಬೆರೆಯುವುದ
ಮರೆತರೂ
ಬರೆಯುವುದ
ಮರೆಯಲಾರೆ,
ಮನದ
ಭಾವ
ನೀನಾಗಿರುವವರೆಗೆ.
**********
ನಿನ್ನ
ಮೆಚ್ಚಿಸಲೆಂದೇ
ಪದಗಳ
ಜೋಡಿಸಿದೆ,
ಮರೆತಿದ್ದೆ
ನೀನೇ
ಸುಂದರ
ಪ್ರೇಮ ಕಾವ್ಯವೆಂದು.
ನಿನ್ನ
ReplyDeleteನೆನಪುಗಳು
ಯಾಕೋ
ದುಬಾರಿಯಾಗಿವೆ
ಇತ್ತೀಚೆಗೆ,
ಪ್ರತಿ ಇರುಳಲು
ನಿದ್ದೆಯ
ಮರೆತು
ಬೆಲೆ ತೆರಬೇಕಾಗಿದೆ
ನಾನು.
ಚೆನಾಗಿದೆ ಸಾರ್...
ಬರೀರಿ ಬರೀರಿ :)