28 December, 2013

*ಮಾತು-ಮೌನ*



ನನ್ನೊಳಗಿನ
ಭಾವ ನೀನು
ಬಂಧಿಯಾದಾಗ
ನಾ
ಪ್ರೇಮಿಯಾದೆನು,
ನನ್ನೊಳಗಿನ
ಮೌನ ನೀನು
ಮಾತಾದಾಗ
ವಿರಹಿ ನಾನು
ಕವಿಯಾದೆನು.

**********

ಪ್ರತಿ ಮಾತಲ್ಲೂ
ಪ್ರೀತಿ ಹುಡುಕುವ
ನಾನು,
ನಿನ್ನ ಮೌನವ
ಅರ್ಥೈಸಿಕೊಂಡಿದ್ದರೆ
ಅದೆಷ್ಟೋ
ಶೃಂಗಾರ ಕಾವ್ಯಗಳ
ಸೃಷ್ಟಿಸಬಹುದಿತ್ತು.

2 comments:

  1. ಮೊದಲ ಹಾನಿಯ ವಿರಹಿಯ ಭಾವ ಮತ್ತು ಎರಡನೇ ಹನಿಯ ಶೃಂಗಾರ ಕವಿಯ ಹಪಹಪಿ ಮನಸೆಳೆಯುತ್ತದೆ.

    ReplyDelete