ದೂರ ದಿಗಂತದಾಚೆ ಸರಿದು
ಚುಕ್ಕಿಗಳ ಲೋಕದಲಿ ಮಿನುಗುವಾಸೆ,
ಯಾರೂ ಇರದ ಆ ಲೋಕದಲಿ
ಪುಟ್ಟ ಗೂಡು ಕಟ್ಟುವಾಸೆ.
ಮತ್ತೆ ತಿರುಗಿ ನೋಡಿದರಲ್ಲಿ
ಸ್ವರ್ಗ ಸದೃಶ ಈ ಧರೆಯು,
ಹಿಂತಿರುಗಿ ಬರುವ ಆಸೆ ನನ್ನವರ ನೋಡಲು
ಮನಸೇಕೋ ಅಂಜುತಿದೆ ಇರುವ ಜಂಜಡಗಳ ನೆನೆದು.
ಏಕಾಂಗಿಯಾಗೇ ಇರಬಲ್ಲೆ ಉಸಿರು ಇರುವವರೆಗೂ
ಬೆರೆಯಲಾರೆ ನಾ ಸ್ವಾರ್ಥದಲೆಗಳ ನಡುವೆ,
ಏನೂ ಅರಿಯದ ಮುಗ್ಧತೆ ನನದಲ್ಲ
ಆದರೂ ಅಳುಕುತಿದೆ ಮನಸು ಗೋಮುಖ ವ್ಯಾರ್ಘಗಳ ನೆನೆದು.
ಸ್ವಾರ್ಥದ ಮನೆಯಂಗಳದೊಳು
ನಂಬಿಕೆಯ ಹೂವು ಅರಳಬಲ್ಲುದೇ,
ನಂಬಿಕೆಯಿಲ್ಲದ ಬದುಕು
ಸಿಹಿಯ ಫಲವ ನೀಡುವುದೇ.
ಚುಕ್ಕಿ ಚಂದ್ರಮರ ಮಂದ ಬೆಳಕೇ ವಾಸಿ
ಸ್ವರ್ಗಸದೃಶ ಭುವಿಯೊಳಗಿನ ನರಕಕ್ಕಿಂತ,
ಪ್ರೀತಿಯಿರದಿದ್ದರೂ ಸರಿಯೇ
ಸ್ವಾರ್ಥದ ನೆರಳಿಲ್ಲದ ಸಾರ್ಥಕತೆಯಿದ್ದರೆ ಸಾಕು.
ಸಾರ್ಥಕತೆಯ ಅರ್ಥವ್ಯಾಪ್ತಿ ಇಲ್ಲಿ ಚೆನ್ನಾಗಿ ಮೂಡಿಬಂದಿದೆ.
ReplyDeletethank u badari sir
Delete