ಬಣ್ಣವಿಲ್ಲದ ಹರಿಯುವ ನೀರಿಗೆ
ಅಂದ ಚಂದದಾ ಹೆಸರನ್ನಿಟ್ಟೆ,
ಬದುಕುವ ಒಂದೇ ಭುವಿಯಲಿ
ಈ ಗಡಿಗಳ ಯಾಕೆ ಕೊರೆದಿಟ್ಟೆ.
ಎಲ್ಲರು ಒಂದೇ ಎನ್ನುವ ನೀನು
ಮತ ಪಂಥಗಳ ಗೋಡೆಯನೇ ಕಟ್ಟಿಸಿದೆ,
ನಿನ್ನಲ್ಲೇ ಇರುವ ದೇವರುಗಳನು
ಕಲ್ಲು ಮಣ್ಣುಗಳಲಿ ಬಂಧಿಸಿದೆ.
ಜಾತಿಯಲೇನೊ ಒಡೆದಿಹೆ ನೀನು
ನಿನ್ನಯ ಸ್ವಂತ ಕುಲವನ್ನೇ,
ಭಾಷೆಯ ಮೇಲ್ಯಾಕೆ ಮತ್ತೆ ಒಡೆಯುವೆ
ನಿನ್ನಯ ಕರುಳು ಸಂಬಂಧಗಳ.
ಯಾರೂ ಅರಿಯದ ರೀತಿ ನೀತಿಗಳಲಿ
ನಿನ್ನಯ ನೀನೇ ಬಂಧಿಸಿದೆ,
ನಿನ್ನಯ ಅಹಂಮ್ಮಿನ ಕಾರಣಕೇನು
ಸೃಷ್ಟಿಯ ನೀನು ಹಂಗಿಸಿದೆ.
ಪ್ರಕೃತಿಯ ಹಂಗಲ್ಲಿ ನೀನು ಬದುಕಿರುವೆ
ತಿಳಿದುಕೋ ಮೊದಲು ಓ ಮನುಜ,
ಸ್ವಾರ್ಥದಿ ಏತಕೆ ಬಾಳುವೆ ಹೇಳು
ನಿನಗಿರುವುದು ಇಲ್ಲಿ ಮೂರೇ ದಿನ.
No comments:
Post a Comment