ಭಾವನೆಗಳು ಬತ್ತಿದೆದೆಯಲಿ
ಪ್ರೀತಿಯನರಸಿ ಹೊರಟಿರುವೆ
ಸತ್ತ ನರನಾಡಿಗಳಿಗೆ
ಮತ್ತೆ ಚೈತನ್ಯ ತುಂಬುವಾಸೆಯಲಿ.
ಅಘೋರಿಗಳ ಅಜ್ಞಾತವಾಸದಲಿ
ನಿರ್ವಿಕಾರಿ ನಿರ್ದಯಿಗಳೆದೆಗಳಲಿ
ಸತ್ತ ಭಾವನೆಗಳ ಬಡಿದೆಚ್ಚರಿಸುವ
ತುಂತುರು ಸಿಂಚನ ಈ ಪ್ರೀತಿಯ.
ನಂಬಿಕೆಗೆ ಗೋರಿ ಕಟ್ಟಿ
ಅಪನಂಬಿಕೆಯಲೇ ಬದುಕುತ್ತಿರುವ
ಅಜ್ಞಾನಿಗಳೆದೆಯಲ್ಲಿ
ವಿಶ್ವಾಸವ ಬೆಳೆಸುವ ಚಿರಸ್ಮರಣೀಯ ಪ್ರೀತಿಯ.
ದ್ವೇಷದಿಂದ ಕತ್ತಿ ಮಸೆಯುತಿರುವ
ರಕ್ತಕ್ಕಾಗಿ ಹಪಹಪಿಸುತಿರುವ
ಮೂಢ ಮನಸುಗಳಲಿ
ಸ್ನೇಹದಾ ಸಣ್ಣ ಚಿಲುಮೆಯೊಂದ.
ಜಾತಿ ಧರ್ಮಗಳ ಗೋಡೆಯ ಕಟ್ಟಿರುವ
ಮತಾಂಧ ಮನಸುಗಳೊಳಗೆ
ಮಾನವೀಯತೆಯ ತತ್ವ ಬೆಳಗುವ
ನಿತ್ಯ ನೂತನ ಜೀವನ ಪ್ರೀತಿಯ...
ಪ್ರೀತಿಯ ಅನ್ವೇಷಣೆಯ ತೀವ್ರ ಆಶಯ ಚೆನ್ನಾಗಿ ಮೂಡಿಬಂದಿದೆ.
ReplyDeletethank u so much sir ji
ReplyDelete