19 June, 2015

ನನ್ನ ಚೆಲುವೇ...


ಚಂದ್ರವದನೆ ಚೆಲುವ ನಯನೆ
ಚಂದ್ರ ಕೂಡ ನಾಚಿ ಹೋದ ನಿನ್ನ ನಗುವಿಗೆ,
ಇಂದ್ರ ತಾನು ಮೈ ಮರೆತೇಹೋದ ನಿನ್ನ ಚೆಲುವಿಗೆ
ಮನುಜ ನಾನು ಪ್ರೇಮಿಯಾದೆ ನಿನ್ನ ನೋಟಕೆ.


ಮನಸಿನೊಳಗೆ ನೂರು ಕಲರವ ಅದು ನಿನಗಾಗೇ
ನೋಡೋ ಮುಂಚೆಯೆ ಮನಸು ಕಳೆದುಹೋಯಿತು,
ಮೊದಲ ನೋಟಕೆ ಒಲವು ಮೂಡಿದೆ ಪ್ರೇಮಿ ನಾ ನಿನಗೆ
ನೋಟ ಬೆರೆತ ಕ್ಷಣದಲ್ಲೇ ಮಾತು ಮರೆತು ಕವಿಯೇ ಆಗೋದೆ.

ಚೆಲುವಿಗಾಗಿ ಬಯಸಲಿಲ್ಲಾ ದೇವರಾಣೆ ನಾ ನಿನ್ನ
ಮುಗ್ಧ ಮನಸಿಗೆ ಸೋತು ಹೋದೆನು ಇಂದು ನಾ ಚಿನ್ನಾ,
ನಗುವಿನಲ್ಲೇ ಮರೆತುಬಿಟ್ಟೆ ನನ್ನ ತುಂಟತನವೆಲ್ಲಾ
ಜನುಮ ಜನುಮಕೂ ಜೊತೆಯಾಗಿ ಇರುವ ಭಾಷೆಯಿದೆಯಿಲ್ಲಿ.

ಚೆಲುವ ನಾನು ಬಣ್ಣಿಸಲಾರೆ ಕೇಳು ಓ ಹುಡುಗಿ
ನಿನ್ನ ಭಾವನೆಗಳಿಗೆ ಪದವ ನೀಡುವ ಕವಿಯು ನಾನಿಲ್ಲಿ,
ನಿನ್ನ ಮೌನಕೆ ಅಥ೯ವಾಗುವೆ ಬಾಳ ಪಥದಲ್ಲಿ
ಪ್ರೀತಿಗೆ ಪರಿಭಾಷೆಯಾಗು ಸಾಕು ನನ್ನೊಲವೆ ನೀನಿಲ್ಲಿ.

ಮಗುವಿನಂತೇ ಮುದ್ದಿಸೋ ಮನಸು ನನ್ನದು ಒಲವ ಕೂಸಾಗು
ನಿನ್ನ ನಗುವಲಿ ಎಂದೂ ನಾನೇ ಇರುವೆ ಚಿಂತೆಯ ಮರೆತುಬಿಡು,
ನಿನ್ನ ಕನಸುಗಳ ಬಿತ್ತಿಬಿಡು ನನ್ನೆದೆಯಾ ತೋಟದಲಿ
ಕಾವಲುಗಾರ ನಾನಾಗಿರುವೆ ಈ ಬಾಳಪಯಣದಲಿ.

No comments:

Post a Comment