19 June, 2015

ಮುಗಿಯದಾ ಪಯಣ...


ಮೂರು ದಿನದ ಬದುಕ್ಕಲುಂಟು ನೂರು ಚಿಂತೆಯಾ ಕಂತೆ
ಹುಡುಕಿದರೆ ಸಿಗದವಕೆ ಏನೂ ಕಾರಣವೂ,
ನೂರು ಬಯಕೆಗಳಿಲ್ಲಿ ನೂರು ಆಸೆಗಳಿಲ್ಲಿ ಮನಸಿಗೆ
ಅಜ್ಞಾತಲೋಕದಿ ಮನಸ ಪಯಣ ಎಂದೂ ಕೊನೆಕಾಣದೇ.


ಖುಷಿಯ ಹುಡುಕುತಾ ಮನಸು ಹೊರಟಿದೆ ಬಲು ದೂರ
ಇಲ್ಲೇ ಇರುವ ಪ್ರೀತಿಯ ಗುರುತಿಸದೆ ಮನಸದು ಎಂದೂ ಭಾರ,
ನಾನು ಎಂಬುದೇ ಮೊದಲ ಸತ್ಯವೂ ಮನಸ್ಸಿನಲ್ಲಿದೆ ಎಂದೂ
ನಾವು ಎನ್ನುವ ಭಾವವ ಮರೆತು ಮನಸ್ಸಾಗಿದೆ ಅಹಂಮ್ಮಿನ ಗೂಡು.

ಸಂಭಂಧಗಳಲಿ ತಪ್ಪು ಹುಡುಕುವುದೇ ಸಾಧನೆಯಾಗಿದೆ ಇಲ್ಲಿ
ಜೊತೆಗೇ ಇರುವ ಪ್ರೇಮಭಾವವದು ಅರಳುವುದಾದರೂ ಹೇಗೆ,
ಪ್ರೀತಿಯ ಹುಡುಕುತ ಸಾಗುವೆವಿಲ್ಲಿ ಸ್ವಾಥ೯ದ ಭಾವದೊಳಗೆ
ಸ್ವಾಥ೯ವು ಜೊತೆಯಲಿ ಇರಲು ಪ್ರೀತಿಯು ಮರೀಚಿಕೆ ಎಂಬುದ ಮರೆತು.

ಅಜ್ಞಾನವು ತುಂಬಿದ ಮನಸಲಿ ಉಂಟು ನೂರು ಕಲ್ಮಶಗಳು
ನೋಡುವ ದೃಷ್ಟಿಯು ಮಂಜಾಗಿರಲು ಕಾಣದು ದಾರಿಯು ಮುಂದೂ,
ಸ್ವಾಥ೯ದ ಜೀವನ ಸಾಗಿಸ ಹೊರಟಿದೆ ಹುಚ್ಚು ಮನಸದು ಇಲ್ಲಿ
ನಾಳೆಯ ಎಲ್ಲಾ ಕನಸುಗಳಿಗೂ ತಪ೯ಣ ಬಿಟ್ಟಂತಿದೆ ಇಂದು.

ಪ್ರೀತಿಯ ಹುಡುಕುವ ಮನಸಿಗೆ ಬೇಕು ತ್ಯಾಗದ ಬುದ್ಧಿಯು ಜೊತೆಗೇ
ಪ್ರೇಮದ ಪರಿಭಾಷೆಯ ಬರೆಯಲು ಮನಸಾಗಿರಬೇಕು ಶ್ವೇತಪರಧೆ,
ಚಿಂತೆಯು ಇಲ್ಲದೆ ಬದುಕಲುಬೇಕು ನಾಳೆಯು ನಮ್ಮದು ಎನ್ನುವ ಭಾವ
ಕಾರಣ ಹುಡುಕುವ ಮೊದಲು ತೆರೆದರೆ ಸಾಕು ಈ ಮನಸನ್ನೊಮ್ಮೆ...

No comments:

Post a Comment