ನೂರೆಂಟು ರೆಕ್ಕೆಗಳಿಲ್ಲಿ ಮನಸೆಂಬ ಹಕ್ಕಿಗೆ
ಗರಿ ಬಿಚ್ಚಿ ಹಾರಿದೆಯಿಲ್ಲಿ ಕನಸ ಆಗಸದಿ,
ನೋವುಂಟು ನಲಿವುಂಟು ಈ ಪಯಣದಲಿ
ಆಸೆಯೊಂದೆ ಜೊತೆಗಾರ ದೂರ ಸಾಗೋಕೆ.
ಒಲವ ಗುಟುಕೊಂದೆ ಜೀವಜಲವಿಲ್ಲಿ
ಗಮ್ಯವದು ಮಾಯೆಯು ಪಯಣಕಿಲ್ಲಿ,
ಗುರಿಯುಂಟು ಇಲ್ಲಿ ಗುರುವಿಲ್ಲ ಜೊತೆಗೆ
ಆತ್ಮಸ್ತೈರ್ಯವೊಂದೇ ಭೀಮಬಲವಿಲ್ಲಿ ಮನಸಿಗೆ.
ನೆನಪುಗಳ ಮೂಟೆಯ ಭಾರವಿದೆ ಜೊತೆಗೆ
ಹೊತ್ತೊಯ್ಯಲೇಬೇಕು ಪಯಣ ಸಾಗುವವರೆಗೆ,
ದಣಿವಾರದ ಪಯಣ ಮನಸಿಗಿಲ್ಲಿ
ಒಮ್ಮೆ ನಿಂತರೂ ಸಾಕು ಬದಲಾಗುವುದು ದಿಕ್ಕು.
ಕಾಲದಾ ಹಂಗಿಲ್ಲದ ಪಯಣವಿದುವು
ಪ್ರತಿಕ್ಷಣವೂ ಹೋರಾಟ ಹೊಸತನಕ್ಕೆಂದು,
ಶತ್ರುಗಳು ಹೊರಗಿಲ್ಲ ಕಾಲು ಎಳೆಯೋಕೆ
ಮೋಹವೆಂಬ ಮಾಯೆ ಆವರಿಸಿಕೊಳ್ಳೊವರೆಗೆ.
ಬಂಧನವಿಲ್ಲ ಹಾರೊ ಹಕ್ಕಿಗೆ ಇಲ್ಲಿ
ಸಂಭಂದಗಳ ಜಾಲದಲಿ ಸಿಕ್ಕಿ ಬೀಳುವವರೆಗೆ,
ಮುಗಿಯದಾ ಪಯಣವಿದು ನಿತ್ಯನಿರಂತರ
ದೇಹವೆಂಬ ಗೂಡೊಳಗೆ ಉಸಿರ ಕಾಳು ಮುಗಿವವರೆಗೆ.
ಹೊತ್ತೊಯ್ಯಲೇಬೇಕು ಪಯಣ ಸಾಗುವವರೆಗೆ!!!!
ReplyDeleteನೂರಕ್ಕೆ ನೂರರಷ್ಟು ದಿಟವಾದ ಮಾತು...