ಸುಡುವ ಬಿಸಿಲಲ್ಲೂ ಜಡಿ ಮಳೆಯಲ್ಲೂ
ಒಂದೇ ಮಂತ್ರ ಘೋಷ,
ಸುರಿವ ಮಂಜಲ್ಲೂ ಕೊರೆಯೋ ಚಳಿಯಲ್ಲೂ
ಮೊಳಗಿಹುದು ಮಾ ತುಜೇ ಸಲಾಮ್.
ತ್ರಿವರ್ಣ ಧ್ವಜಕೆ ಎದೆ ಉಬ್ಬಿಸಿ ಹಾಡಿದೆ
ವಂದೇ ಮಾತರಮ್ ಗೀತೆ,
ಬರೀಯ ಘೋಷವಲ್ಲವಿದು ಶತೃಗಳ ಎದೆನಡುಗಿಸುವ
ದಿವ್ಯ ಮಂತ್ರ ಗೀತೆ.
ಜಾತಿ ಧರ್ಮಗಳ ಮೇರೆ ಮೀರಿ ನಿಂತಿಹುದು
ಮೂರು ಬಣ್ಣಗಳ ಶಕ್ತಿ,
ದೇಶ ಭಕ್ತಿಯನು ಬಡಿದೆಬ್ಬಿಸಿ ಕುಣಿಸುವಾ
ಜಾದು ಕಣೋ ಈ ಶಕ್ತಿ.
ತ್ಯಾಗ ಪ್ರೀತಿ ಕರುಣೆಗೆ ಕಣ್ಣು ಕಣೋ
ಅದುವೇ ಭರತ ಭೂಮಿ,
ಮತಾಂಧ ದುರುಳರ ಮೆಟ್ಟಿ ನಿಂತು ಮಣ್ಣಾಗಿಸಿದ
ಇದುವೇ ವೀರ ಪುಣ್ಯ ಭೂಮಿ.
ಕೇಳಿ ಮೂಡರೇ ತ್ರಿವರ್ಣವೇ ಸ್ಪೂರ್ತಿಯಿಲ್ಲಿ
ಕೋಟಿ ಕೋಟಿ ಯೋಧರಿಗೆ ಶತ್ರು ಸಂಹಾರಕಾಗಿ,
ಶತ್ರುಗಳ ಗುಂಡಿಗೆ ಎದೆಯ ನೀಡುತಾ
ತಾಯ ಮಡಿಲಲ್ಲಿ ತಲೆ ಇಟ್ಟು ಮಲಗೋವರೆಗೆ.
No comments:
Post a Comment