13 February, 2016

ಒಲವಿಗಾಗಿ...


ನಿನ್ನ ಹಣೆಯ ಸಿಂಧೂರ ನಾನು
ನನ್ನೆದೆಯಾ ಮಂದಾರವಾಗು ನೀನು,
ಬದುಕು ಬರೆದ ಪ್ರೀತಿಯು ನೀನು
ಪ್ರತಿ ಹೆಜ್ಜೆ ಇಡುವೆ ನಿನ್ನ ಜೊತೆಯಲ್ಲೇ.

ಕನಸುಗಳ ಚಿಲುಮೆಯು ನೀನು
ಮನಸ ಬೆಳಗೋ ಚುಕ್ಕಿಯು ನೀನು,
ಚೆಲುವಿನಲಿ ಚಂದ್ರ ಸೋದರಿ ನೀನು
ಪ್ರತಿ ಜನುಮ ನಿನಗೆ ಮೀಸಲಿಡುವೆ.

ತುಂಟ ಮನಸಿನ ಕಿನ್ನರಿ ನೀನು
ತುಂಬು ನಗುವಿನಾ ಬೊಂಬೆಯೂ,
ನನ್ನುಸಿರಿಗೆ ಹೆಸರು ನೀನು
ಕಣ್ಣರೆಪ್ಪೆಯಾಗಿ ಕಾವಲಿರುವೆ ಪ್ರತಿಕ್ಷಣವೂ.

ವಿಧಿಯು ಹರಸಿದ ಸಂಗಾತಿ ನೀನು
ನನ್ನೆದೆಯೊಳಗಿನ ಕಚಗುಳಿಯೂ,
ನನ್ನ ಭಾವಕೆ ಉಸಿರು ನೀನು
ನನ್ನ ಕನಸುಗಳ ನಿನಗೆ ಮೀಸಲಿಡುವೆ.

ಒಲವಿಗೊಂದು ಪ್ರೇಮಕಾವ್ಯ ನೀನು
ನನಗೆ ಎಂದೂ ಶೃಂಗಾರ ಕಾವ್ಯವೂ,
ಪದಗಳಾಗಿ ಕರಗಿಬಿಡುವೆ ನಾನೇ
ಒಲವ ಯಾತ್ರೆಯಲಿ ಜೊತೆಯಾಗಿಬಿಡುವೆ.

No comments:

Post a Comment