01 December, 2016

ಓ ಮನಸೇ...

ಓ ಮನಸೇ ಮನಸೇ
ಜಾರಿ ಹೋಗದಿರು ನೀ ಮನಸೇ,
ಅನ್ಯರ ಭಾವಗಳಿಗೆ ನೀ ಗರ್ಭ ಧರಿಸಬೇಡ
ಅಕ್ರಮವಾದಿತು ಬದುಕು...

ಓ ಮನಸೇ ಮನಸೇ
ನಿಂತ ನೀರಾಗದಿರು ನೀನು,
ಭಾವನೆಗಳ ಬಚ್ಚಿಡಬೇಡ ಅಲ್ಲಿ
ಕೊಳೆತ ಶವವಾದೀತು ಬದುಕು...

ಓ ಮನಸೇ ಮನಸೇ
ಹಾರೋ ಚಿಟ್ಟೆಯಂತೆ ನೀನು,
ಬೀಳಬೇಡ ಅಪನಂಬಿಕೆಯ ಬೆಂಕಿಗೆ
ಕರಗಬಹುದು ಬದುಕು...

ಓ ಮನಸೇ ಮನಸೇ
ಭ್ರಮೆಯೆಂದೂ ಬದುಕಲ್ಲ ಇಲ್ಲಿ,
ಕಳಚಿಬಿಡು ಈ ಮುಖವಾಡ
ಬದುಕಾದೀತು ನಾಟಕರಂಗ...

ಓ ಮನಸೇ ಮನಸೇ
ಬದುಕೆಂಬುದು ಕವಿತೆಯಲ್ಲಾ,
ಬರೆಯದಿರು ನಿನ್ನಯ ಭಾವಗಳ
ಬರಿದಾದಿತು ಬದುಕಿಲ್ಲಿ...

No comments:

Post a Comment