16 December, 2016

ಹೇ ಭಗವಂತ...

ಬದುಕಿಗೆ ಪ್ರೀತಿಯೇ ಇಲ್ಲಿ ತಕಧಿಮಿತ
ಪ್ರೀತಿಗೆ ನಂಬಿಕೆಯೇ ಕಾಗುಣಿತ,
ನೆನಪನ್ನು ನೆಪವಾಗಿಸು ಭಗವಂತ
ಬದುಕಲ್ಲಿ ಕರುಣಿಸು ನೀ ಜೀವದಾ ಸೆಳೆತ...

ದೇಹದ ಜೊತೆಗಿದೆ ಉಸಿರಿನಾ ಕುಣಿತ
ಉಸಿರು ಇರುವರೆಗೂ ದೇಹದಾ ಮಿಡಿತ,
ಬದುಕನ್ನೇ ಭಕ್ತಿಯಾಗಿಸುವೆ ಹೇ ಭಗವಂತಾ
ಹರಸು ನೀನಿಂದು ಬದುಕಿನಾ ಈ ತುಡಿತ...

ಸ್ನೇಹಕ್ಕೂ ಪ್ರೀತಿಗೂ ಇಲ್ಲಿ ಒಡನಾಟ
ಬದುಕಿದು ಸಂಬಂಧಗಳ ಸರಿಗಮಪ,
ಮನಸನ್ನೇ ಸಂಗೀತವಾಗಿಸು ಹೇ ಭಗವಂತ
ಭಾವಗಳ ಬೆಸೆದು ಹರಸು ಈ ಜೊತೆಯಾಟ...

ಕನಸಿಗೂ ಮನಸಿಗೂ ಇಲ್ಲಿ ಕಣ್ಣಮುಚ್ಚಾಲೆ
ಕದ ತೆರೆದು ಒಳ ಕರೆಯುವೆ ಈ ಮನಸಿಗೆ,
ಮನಸಿನ ವ್ಯಥೆ ಕೇಳು ಓ ಭಗವಂತ
ಕನಸಿಗೆ ಕನಿಕರಿಸು ನೀ ಹೇ ವಿಧಾತ...

ಕತ್ತಲೆಗೂ ಬೆಳಗಿಗೂ ಜೊತೆಯಾಟ ಈ ಬದುಕು
ಉರಿಸಿಡುವೆ ಅದಕೆಂದೇ ಜ್ಞಾನದ ಬೆಳಕೊಂದ,
ಹರಸು ನೀ ಎಂದೂ ಹೇ ಭಗವಂತ
ಬೆಳಕಲ್ಲೇ ಮುನ್ನಡೆಸು ಈ ಬದುಕನ್ನ....


No comments:

Post a Comment