ಜೀವ ಇರುವರೆಗೂ ಆಟ ಹುಡುಕಾಟ
ಉಸಿರು ನಿಂತೋದ ಮೇಲೆ ಆತ್ಮದ ಪರದಾಟ,
ಬದುಕಿ ಇರುವರೆಗೂ ನಮ್ಮವರ ಹುಡುಕಾಟ
ಬದುಕು ಮುಗಿದಾಗ ಬಂಧುಗಳ ಗೋಳಾಟ...
ಬದುಕು ಇದು ನಿಲ್ಲದ ಕನಸುಗಳ ಹುಡುಕಾಟ
ಆಸೆಗಳ ಬೆನ್ನು ಹತ್ತಿ ಕೊನೆವರೆಗೂ ನರಳಾಟ,
ನಿರಂತರ ನೋವುಗಳ ಜೊತೆ ನಿತ್ಯ ಹೊಡೆದಾಟ
ಕೊನೆಯಿಲ್ಲದ ಸಮಸ್ಯೆಗಳೊಳಗೆ ನಿತ್ಯ ನೂಕಾಟ...
ಬದುಕು ಇರುವುದಿಲ್ಲಿ ಮೂರೇ ದಿನದ ಆಟ
ನಿನ್ನೆ ಇಂದು ನಾಳೆಗಳ ನಡುವೆ ನಿತ್ಯ ಹುಡುಕಾಟ,
ಪ್ರೀತಿ ಸ್ನೇಹ ಸಂಬಂಧಗಳ ನಿರಂತರ ತಾಕಲಾಟ
ನಾನು ನೀನೆಂಬ ಮೇಲು ಕೀಲಾಟ...
ಖುಷಿಯ ಹುಡುಕುತ್ತಾ ನಿತ್ಯ ನರಳಾಟ
ಗೊಂದಲದ ಬದುಕೊಳಗೆ ಶಾಂತಿಯ ಹುಡುಕಾಟ,
ಮರೆತೂ ಮರೆಯದ ಜೀವನದ ಪೀಕಲಾಟ
ಬದುಕು ಆ ದೇವರು ಆಡಿಸುವ ಕಣ್ಣಮುಚ್ಚಾಲೆ ಆಟ...
ಉಸಿರು ನಿಂತೋದ ಮೇಲೆ ಆತ್ಮದ ಪರದಾಟ,
ಬದುಕಿ ಇರುವರೆಗೂ ನಮ್ಮವರ ಹುಡುಕಾಟ
ಬದುಕು ಮುಗಿದಾಗ ಬಂಧುಗಳ ಗೋಳಾಟ...
ಬದುಕು ಇದು ನಿಲ್ಲದ ಕನಸುಗಳ ಹುಡುಕಾಟ
ಆಸೆಗಳ ಬೆನ್ನು ಹತ್ತಿ ಕೊನೆವರೆಗೂ ನರಳಾಟ,
ನಿರಂತರ ನೋವುಗಳ ಜೊತೆ ನಿತ್ಯ ಹೊಡೆದಾಟ
ಕೊನೆಯಿಲ್ಲದ ಸಮಸ್ಯೆಗಳೊಳಗೆ ನಿತ್ಯ ನೂಕಾಟ...
ಬದುಕು ಇರುವುದಿಲ್ಲಿ ಮೂರೇ ದಿನದ ಆಟ
ನಿನ್ನೆ ಇಂದು ನಾಳೆಗಳ ನಡುವೆ ನಿತ್ಯ ಹುಡುಕಾಟ,
ಪ್ರೀತಿ ಸ್ನೇಹ ಸಂಬಂಧಗಳ ನಿರಂತರ ತಾಕಲಾಟ
ನಾನು ನೀನೆಂಬ ಮೇಲು ಕೀಲಾಟ...
ಖುಷಿಯ ಹುಡುಕುತ್ತಾ ನಿತ್ಯ ನರಳಾಟ
ಗೊಂದಲದ ಬದುಕೊಳಗೆ ಶಾಂತಿಯ ಹುಡುಕಾಟ,
ಮರೆತೂ ಮರೆಯದ ಜೀವನದ ಪೀಕಲಾಟ
ಬದುಕು ಆ ದೇವರು ಆಡಿಸುವ ಕಣ್ಣಮುಚ್ಚಾಲೆ ಆಟ...
No comments:
Post a Comment