23 December, 2016

ಲೆಕ್ಕಾಚಾರ...

ಬದುಕು ಅನ್ನೋದು ಇಲ್ಲಿ ಪಾಠಶಾಲೆ
ಕೇಳು ಗೆಳೆಯಾ ನೀನು ಕೇಳು ಇಲ್ಲಿ,
ಜೀವನ ತುಂಬಾ ಇಲ್ಲಿ ಬರೀಯ ಲೆಕ್ಕಾಚಾರ
ಗುಣಾಕಾರ ಭಾಗಾಕಾರಗಳ ಸಂಗಮವಿಲ್ಲಿ ನೋಡ...

ಖುಷಿಯನ್ನಿಂದು ಇಲ್ಲಿ ಗುಣಿಸಬೇಕು
ವಿಶೇಷವಾಗುವವರೆಗೂ ಗುಣಾಕಾರ ಮಾಡಬೇಕು,
ನೋವುಗಳನ್ನೆಲ್ಲಾ ಭಾಗಿಸಬೇಕು
ಶೇಷ ಅಳಿಯೋವರೆಗೂ ಭಾಗಾಕಾರ ಮಾಡಬೇಕು...

ಸ್ನೇಹ ಪ್ರೀತಿಯನ್ನಿಲ್ಲಿ ಕೂಡಿಸಬೇಕು
ಮನಸು ಮನಸುಗಳು ಇಲ್ಲಿ ಜೊತೆಯಾಗಬೇಕು,
ಕೇಳು ಗೆಳೆಯಾ ನೀನು ಕೇಳು ಇಲ್ಲಿ
ಜೀವನ ಪಾಠಶಾಲೆ ತುಂಬ ಬರೀಯ ಲೆಕ್ಕಾಚಾರ...

ದ್ವೇಷ ಅಸೂಯೆಗಳ ಇಲ್ಲಿ ಕಳೆಯಬೇಕು
ಅಪನಂಬಿಕೆಯ ಬೇರನು ಕಿತ್ತೆಸೆಯಬೇಕು,
ಕೇಳು ಗೆಳೆಯಾ ನೀನು ಸ್ವಲ್ಪ ಕೇಳು ಇಲ್ಲಿ
ಜೀವನ ತುಂಬ ಇಲ್ಲಿ ಗುಣಾಕಾರ ಭಾಗಾಕಾರ...

ಒಡೆದುಹೋದ ಮನಸುಗಳ ಕೂಡಿಸಬೇಕು
ಜಾರಿ ಹೋದ ಕಣ್ಣೀರ ಹನಿಗಳ ಕಳೆದುಬಿಡಬೇಕು,
ಗುಣಗಳನ್ನ ಪ್ರೀತಿಯ ಜೊತೆಗೆ ಗುಣಿಸಬೇಕು
ಭಾವನೆಗಳ ಜೊತೆಗೆ ಒಂದಷ್ಟು ಬಾಗಬೇಕು...

No comments:

Post a Comment