ಸಂತೆಯಲ್ಲಿ ನಿಂತರೂ ಒಂಟಿಯೆಂಬ ಭಾವ
ಕಾಡುತಿದೆ ಇಂದು ಮನದಲಿ,
ಮಾತಾಡು ಮನಸೇ ನೀ ಇಲ್ಲಿ
ಮತ್ತೆಲ್ಲೋ ಕಳೆದು ಹೋಗುವ ಮುಂಚೆಯೇ...
ಒಲವ ಗುಂಗಲಿ ಮರೆತ ಮನಸಿಗೆ
ಮತ್ತೆ ಮತ್ತೆ ಕಾಡಿದೆ ನಿರಾಸೆಯ ಭೂತ,
ಓಡುವ ಕಾಲವೂ ಕೂಡ ಮರೆತು ಹೋದಂತಿದೆ
ನಡೆಯುವ ಕಾಲು ಮತ್ತೆ ಮತ್ತೆ ಎಡವಿದೆ...
ಬದುಕೆಂಬ ಬಂಡಿಯಲಿ ಗೊಂದಲವು ನೂರು
ಕನಸುಗಳ ಮೂಟೆ ಕರಗಿ ನೀರಾಗುತಿದೆ ಇಲ್ಲಿ,
ಮನಸಿನ ಸುತ್ತ ನಾಲ್ಕು ಗೋಡೆಗಳು ಇಲ್ಲಿ
ಜೊತೆಯಲ್ಲಿರುವ ಮನಸುಗಳವು ಮಾತ್ರ ಅಸ್ಪಷ್ಟ...
ಪ್ರೀತಿಯೆಂಬುದು ಬರೀಯ ಮರೀಚಿಕೆಯಿಲ್ಲಿ
ಬರೀಯ ಕನಸುಗಳ ಕನವರಿಕೆಯಷ್ಟೇ,
ಕಲ್ಲಾಗದಿರು ಓ ಮನಸೇ ಬಾಳ ಪಯಣದಲಿ
ಒಂಟಿಯಾಗದಿರಲಿ ಬದುಕು ಈ ಭಾವಯಾನದಲಿ...
ಕಾಡುತಿದೆ ಇಂದು ಮನದಲಿ,
ಮಾತಾಡು ಮನಸೇ ನೀ ಇಲ್ಲಿ
ಮತ್ತೆಲ್ಲೋ ಕಳೆದು ಹೋಗುವ ಮುಂಚೆಯೇ...
ಒಲವ ಗುಂಗಲಿ ಮರೆತ ಮನಸಿಗೆ
ಮತ್ತೆ ಮತ್ತೆ ಕಾಡಿದೆ ನಿರಾಸೆಯ ಭೂತ,
ಓಡುವ ಕಾಲವೂ ಕೂಡ ಮರೆತು ಹೋದಂತಿದೆ
ನಡೆಯುವ ಕಾಲು ಮತ್ತೆ ಮತ್ತೆ ಎಡವಿದೆ...
ಬದುಕೆಂಬ ಬಂಡಿಯಲಿ ಗೊಂದಲವು ನೂರು
ಕನಸುಗಳ ಮೂಟೆ ಕರಗಿ ನೀರಾಗುತಿದೆ ಇಲ್ಲಿ,
ಮನಸಿನ ಸುತ್ತ ನಾಲ್ಕು ಗೋಡೆಗಳು ಇಲ್ಲಿ
ಜೊತೆಯಲ್ಲಿರುವ ಮನಸುಗಳವು ಮಾತ್ರ ಅಸ್ಪಷ್ಟ...
ಪ್ರೀತಿಯೆಂಬುದು ಬರೀಯ ಮರೀಚಿಕೆಯಿಲ್ಲಿ
ಬರೀಯ ಕನಸುಗಳ ಕನವರಿಕೆಯಷ್ಟೇ,
ಕಲ್ಲಾಗದಿರು ಓ ಮನಸೇ ಬಾಳ ಪಯಣದಲಿ
ಒಂಟಿಯಾಗದಿರಲಿ ಬದುಕು ಈ ಭಾವಯಾನದಲಿ...
No comments:
Post a Comment