18 March, 2017

ಸ್ನೇಹಲೋಕ...

ನಕ್ಷತ್ರಗಳೇ ಉದುರಿ ಮರು ಹುಟ್ಟುವವು ಈ ಭೂಮಿ ಮ್ಯಾಲಂತೆ,
ಮನುಜರು ಕೂಡ ಸತ್ತು ಮತ್ತೆ ನಕ್ಷತ್ರಗಳಾಗುವರಂತೆ,
ಯಾವುದು ನಿಜವೋ ತಿಳಿದಿಲ್ಲ ಎನಗೆ
ಮನಸೊಳಗೆ ಮಾತ್ರ ಈ ಸ್ನೇಹ ನಕ್ಷತ್ರ ಲೋಕವಾಗಿದೆ...

ಮಿನುಗೊ ತಾರೆಗಳು ಆ ಆಗಸದ ತುಂಬ
ಮೋಡಗಳೊಳಗೆ ಸೇರಿ ಆಡುವುದು ಅಂದ,
ಮನದ ಆಗಸದಿ ಸ್ನೇಹಿತರೆ ತುಂಬಾ ತುಂಬಾ
ನಗಿಸುತ್ತಾರೆ,ಅಳಿಸುತ್ತಾರೆ ತುಂಟಾಟದಿಂದ...

ಚಂದಮಾಮನ ಬಳಗ ಚುಕ್ಕಿತಾರೆಗಳೆ ಚೆಂದ
ಚಂದದೊಂದು ಬಳಗವಿರಲು ಬಾಳೆಲ್ಲಾ ಅಂದ,
ಪ್ರೀತಿಯಲಿ ಇಲ್ಲಿ ಕಾಲೆಳೆಯುವುದೇ ಚೆಂದ
ನೋವಿನಲಿ ಸೇರಿ ಹೆಗಲಾಗುವುದೇ ಆನಂದ...

ಕತ್ತಲೆಯಲ್ಲಿ ಮಿನುಗುತಾವೆ ಚುಕ್ಕಿ ತಾರೆಗಳು ಅಲ್ಲಿ
ಹೃದಯದಲಿ ಬೆಳಗುತಾವೆ ಪ್ರೀತಿಯಾ ದೀಪಗಳು ಇಲ್ಲಿ,
ಹಗಲು ರಾತ್ರಿಯ ಹಂಗಿಲ್ಲ ಸ್ನೇಹಲೋಕದ ಪಯಣದಲಿ
ಉಸಿರಿರುವವರೆಗೆ ಉಸಿರಾಗುತಾವೆ ಸ್ನೇಹದಾ ನಾಡಿಗಳಿಲ್ಲಿ...



No comments:

Post a Comment