ಪ್ರೀತಿಲಿ ಬೀಳೊಕೆ ಮುಂಚೆ
ಬದುಕೆಷ್ಟು ಸುಂದರ,
ಪ್ರೀತಿಲಿ ಬಿದ್ದ ಮೇಲೆ
ಮನಸಾಯ್ತು ನೂರು ಹಂದರ...
ಒಲವು ಮೂಡೋಕೆ ಮುಂಚೆ
ಮನಸು ತೆರೆದ ಆಗಸ,
ಒಲವು ಶುರುವಾದ ಮೇಲೆ
ಮನಸಾಯ್ತು ಮೋಡ ಕವಿದ ಬಾಂದಳ...
ಕನಸು ಕಾಣೋಕು ಮೊದಲು
ಹೃದಯ ಶಾಂತ ಸಮುದ್ರ,
ಕನಸು ಶುರುವಾದ ಮೇಲೆ
ಎದೆಯೊಳಗೆ ಏಕೋ ಡವ ಡವ...
ಆಸೆ ಹುಟ್ಟೋಕೆ ಮುಂಚೆ
ಬದುಕೆಲ್ಲಾ ಮಂದಾರ,
ಆಸೆಯೊಳಗೆ ಬಿದ್ದ ಮೇಲೆ
ಬದುಕಾಯ್ತು ಹರೋಹರ...
ಮಾತು ಹುಟ್ಟೋಕು ಮುಂಚೆ
ಮನಸಲಿ ನೂರು ಭಾವ ಕಲರವ,
ಮಾತು ಶುರುವಾದ ಮೇಲೆ
ಮನಸೊಳಗೆ ಮೌನ ರೋಧನ...
ಬದುಕೆಷ್ಟು ಸುಂದರ,
ಪ್ರೀತಿಲಿ ಬಿದ್ದ ಮೇಲೆ
ಮನಸಾಯ್ತು ನೂರು ಹಂದರ...
ಒಲವು ಮೂಡೋಕೆ ಮುಂಚೆ
ಮನಸು ತೆರೆದ ಆಗಸ,
ಒಲವು ಶುರುವಾದ ಮೇಲೆ
ಮನಸಾಯ್ತು ಮೋಡ ಕವಿದ ಬಾಂದಳ...
ಕನಸು ಕಾಣೋಕು ಮೊದಲು
ಹೃದಯ ಶಾಂತ ಸಮುದ್ರ,
ಕನಸು ಶುರುವಾದ ಮೇಲೆ
ಎದೆಯೊಳಗೆ ಏಕೋ ಡವ ಡವ...
ಆಸೆ ಹುಟ್ಟೋಕೆ ಮುಂಚೆ
ಬದುಕೆಲ್ಲಾ ಮಂದಾರ,
ಆಸೆಯೊಳಗೆ ಬಿದ್ದ ಮೇಲೆ
ಬದುಕಾಯ್ತು ಹರೋಹರ...
ಮಾತು ಹುಟ್ಟೋಕು ಮುಂಚೆ
ಮನಸಲಿ ನೂರು ಭಾವ ಕಲರವ,
ಮಾತು ಶುರುವಾದ ಮೇಲೆ
ಮನಸೊಳಗೆ ಮೌನ ರೋಧನ...
No comments:
Post a Comment