30 March, 2017

ಸ್ನೇಹಿತ...

ಓ ಸ್ನೇಹಿತ ಮನಸಿಗೆ ನೀನೇ ಹಿತ
ನೂರು ನೋವುಗಳ ಮರೆಸೋ ಜಾದುಗಾರ ನೀನು,
ಭಾವಗಳ ಸಂಗಮ ನೀ ಮಾಯಾಕಾರ ಕಣೋ
ಬಸವಳಿದ ಜೀವಕ್ಕೆ ಹೆಗಲು ನೀಡೋ ಮಹಾರಾಯ...

ಮನಸಿನ ಅಂಗಳದ ಮಲ್ಲೆ ಮೊಗ್ಗು ನೀನೇ
ಪರಿಮಳವ ಸೂಸುತ್ತ ಬಾಳೆಲ್ಲಾ ನಗುವೇ,
ಮನಸಿನ ಬಾಂದಳದ ಚಂದ್ರಮನು ನೀನೇ
ಕಷ್ಟಗಳ ಕತ್ತಲ ಕಳೆಯೋ ಬೆಳದಿಂಗಳಾಗುವೆ...

ಪ್ರೀತಿಯಲಿ ಪರಪಂಚ ನೀ ಪ್ರೀತಿಗೆ ಪರಪಂಚ
ಕಣ್ಣೀರ ಹನಿಯನ್ನೂ ಮುತ್ತಂತೆ ಕಾಪಾಡೋ ಧೀಮಂತ,
ಜನುಮ ಜನುಮದಾ ಬಂಧು ಪ್ರೀತಿಯಲಿ ಶ್ರೀಮಂತ
ಸ್ನೇಹಕ್ಕೆ ಉಸಿರಾಗೋ ಪ್ರೀತಿಯಾ ಸೇವಕ...

ಕನಸುಗಳ ಬೇಟೆಗಾರ ಕನಸಿಗೆ ಹೆಸರು ನೀನು
ಮನಸುಗಳ ಬೆಸೆಯೋ ನೀನು ಅಪ್ರತಿಮ ಕಲಾಕಾರ,
ಬದುಕಿನಾ ಭರವಸೆಯೇ ಚಂದಿರನಾ ತಂಪು ನೀನು
ಈ ಸ್ನೇಹದಾ ಒಡಲಲ್ಲಿ ಮತ್ತೆ ಮತ್ತೆ ಉದಯಿಸುವಾ ರವಿಯೂ ನೀನು...











No comments:

Post a Comment