15 April, 2017

ಭಾವಯಾನ...

ಕಾಣದ ಊರಿಗೆ ಹೇಳದೆ ಹೊರಟೆ
ಪ್ರೀತಿಯ  ಹುಡುಕುತ್ತಾ ನೀನು,
ಹತ್ತಿರವಿದ್ದರೂ ದೂರವೇ ನಿಂತೆ
ಈ ಪ್ರೀತಿಯ ಗುರುತಿಸದೇ ...

ಆಡದೆ ಉಳಿದವು ಮನಸಿನ ಮಾತವು
ಮೌನದ ಮರೆಯಲಿ ನೂರಾರು,
ತಿಳಿಯದ ದಾರಿಯ ಹುಡುಕುತಲಿರುವೆ
ಕೇಳಲು ಕಾರಣವೊಂದನ್ನು...

ಭರವಸೆಯಿಲ್ಲದೆ ದಾರಿಯ ಕಾಯುತಲಿರುವೆ
ಬರುವೆ ನೀನು ಇನ್ನೆಂದೂ,
ಭಾವಗಳೆಲ್ಲವು ಮಾತಾಗಿಹವು
ಹೇಳಲು ಕೇಳಲು ವಿಷಯವು ನೂರಾರು...

ನನ್ನಯ ಈ ಭಾವಯಾನದಲಿ
ನಿನ್ನಯ ನೆನಪದು ನೂರಾರು,
ನಿನ್ನೆಯ ಮರೆಯಲು ಕಾರಣವಿಲ್ಲಿದೆ ಹಲವಾರು
ಆದರೆ ಮನಸಿಗೆ ವಯಸ್ಸಿನ್ನೂ ಹದಿನಾರು...

ಕಣ್ಣಂಚಲಿ ಬತ್ತಿ ಹೋದ ಕಣ್ಣೀರೂ
ಕಥೆ ಹೇಳಿದೆ ಇಲ್ಲಿ ನೂರಾರು,
ಬದುಕಿಗೆ ಪಾಠವ ಕಲಿಸಿವೆಯಿಲ್ಲಿ
ಮುದುಡಿದ ಕನಸವು ಹಲವಾರು...






No comments:

Post a Comment