23 April, 2017

ಬದುಕು...

ಬದುಕಿನ ಯಾತ್ರೆಯಿದು
ನೆನಪುಗಳ ಮೆರವಣಿಗೆ,
ಪ್ರೀತಿಯ ಜಾತ್ರೆಯಿದು
ಇಲ್ಲಿ ಎಲ್ಲರೂ ಪ್ರೇಮಿಗಳೇ...

ಬರುವಾಗ ಒಬ್ಬರೇ
ಆಮೇಲೆ ಎಲ್ಲರೂ ಬಂಧುಗಳೇ,
ನೂರೆಂಟು ಸುಳಿಯೊಳಗೆ
ನಾವಿಲ್ಲಿ ಬಂಧಿಗಳೇ...

ಕಣ್ಣಿರುವುದು ಎರಡಾದ್ರು
ಕನಸುಗಳಿಲ್ಲಿ ಹಲವಾರು,
ಮನಸು ಒಂದಾದ್ರು
ಮರೀಚಿಕೆ ಖುಷಿಯಿಲ್ಲಿ...

ಕಾಲದ ಓಟದಲಿ
ಕಳೆದು ಹೋದವರು ಹಲವಾರು,
ಕಾರಣ ಹೇಳದೆ
ಮರೆಯಾದರು ಹಲವರು..

ಜೀವನವೊಂದು ಪ್ರಶ್ನೆಯೂ
ಪರಿಹರಿಸೋಕೆ ಉತ್ತರ ಸಿಗದಿಲ್ಲಿ,
ಮರಣವೇ ಉತ್ತರವೂ
ಪ್ರಶ್ನಿಸಲಾಗದು  ಬದುಕಲ್ಲಿ...

No comments:

Post a Comment