11 April, 2017

ಅವಳು...

ಅವಳೊಂದು ಸುಂದರ ಕವನ
ಪ್ರತಿ ನುಡಿಯಲ್ಲೂ ಅಂದದ ತನನ,
ಮನದಲ್ಲಿದೆ ಪ್ರೀತಿಯ ಹೂರಣ
ಜಗಕೆಲ್ಲಾ ಬದುಕುವ ಕಾರಣ...

ಅವಳೆಂದರೆ ಪ್ರೀತಿಯ ಕಥನ
ಪ್ರತಿ ಕ್ಷಣವು ತರಲೆಯ ಖಜಾನ,
ದಿನ ನೂರು ದೂರಿನ ತೇರು
ಅವಳಿಲ್ಲಿ ಜೊತೆ ನಿಲ್ಲೋ ಕಾವಲಿನವಳು...

ಅವಳಿಲ್ಲಿ ಸ್ನೇಹಕೆ ಭಾಷ್ಯ
ಪ್ರತಿ ಕ್ಷಣವೂ ನಗುವಿಗೆ ಸ್ಪೂರ್ತಿ,
ಅವಳಿಂದಲೇ ಕನಸಿಗೆ ಅರ್ಥ
ಪ್ರತಿ ಕ್ಷಣವೂ ನೂತನ ವರ್ಷ...

ಅವಳೆಂದರೆ ತ್ಯಾಗದ ಹೆಸರು
ಅವಳಿಂದಲೇ ಉಸಿರಿದು ಹಸಿರು,
ಅವಳಿಲ್ಲಿ ಮುಗಿಯದ ಬಾನು
ಅವಳೆಂದರೆ ಬಾಳಿನ ಭಾನು...


No comments:

Post a Comment