02 November, 2018

ಅಂತರಂಗ...

ಒಳಗೊಳಗೆ ಅಳುವ ಮನಸೀಗೆ
ಯಾವ ಮದ್ದು ಇಲ್ವೆ ಭಗವಂತ,
ಕಾರಣ ಇಲ್ಲದೆ ಕಾಡೋ ನೋವಿಗೆ
ಕಾರಣ ಕೊಡಲಿ ನಾ ಏನಂತ...

ವರವೋ ಇದು ಶಾಪವೋ
ತಿಳಿಯಲಿ ನಾ ಹೇಗಂತ,
ಮನಸಿನ ಈ ಕಳವಳಕೆ
ಹೇಳಲೇ ನಾನು ಆತಂಕ...

ಮನಸಿನ ಗಾಯ ಮಾಗೋಕೆ
ನಗುವಿನ ಮುಲಾಮು ಹಚ್ಚಿದೆ,
ಒಳಗಿನ ನೋವು ಹೆಚ್ಚಾಗಿರೆ
ನಗುವಿನ ಲೇಪವೂ ಕರಗಿದೆ...

ಹೃದಯದ ಗಾಯ ಮಾಸೋಕೆ
ಔಷಧಿ ಯಾವುದು ಹೇಳಪ್ಪ,
ಕಾಯಿಲೆಯಿಲ್ಲದೆ ಜೀವ ನರಳುತಿರೆ
ಬದುಕಿಸೊ ಮದ್ದು ಯಾವುದು ಭಗವಂತ...

No comments:

Post a Comment