ನಾನು ಮೆಚ್ಚಿದ ಮೊದಲ ನಗುವು
ಮನಸು ಮೆಚ್ಚಿದ ತೊದಲ ನುಡಿಯು,
ಪ್ರೀತಿ ಕಲಿಸಿದಾ ಮೊದಲ ಹೆಣ್ಣು
ಬದುಕು ಬಯಸಿದಾ ಮೊದಲ ಕನಸು...
ಬದುಕು ಹರಸಿದ ಮೊದಲ ಗೆಳತಿ
ಮನಸ ಹರಸಿದ ಮೊದಲ ಪ್ರೀತಿ,
ಭಾವಗಳಿಗೆ ರೆಕ್ಕೆ ಕಟ್ಟಿದಾಕಿ
ಮೊದಲು ಮೂಡಿದಾ ಒಲುಮೆಯ ರೀತಿ...
ಅವಳೊಂದು ನಗುವ ಬುಗ್ಗೆ
ಬದುಕಲಿ ಭರವಸೆಯ ಚಿಲುಮೆ,
ಕೋಪವಿರದ ಮನಸು ಅವಳದು
ನೋವಲೂ ನಗುವ ಗುಣದವಳಾಕೆ...
ನನ್ನೊಳಗಿನ ಕವಿತೆಯೀಕೆ
ಕನಸಿಗೆ ಎಂದೂ ಸ್ಫೂರ್ತಿಯವಳು,
ನನ್ನೊಳಗಿನ ಒಲವ ಮನಸೇ
ಗಂಡಿನೊಳಗಿನ ಹೆಣ್ತನವೂ ನೀ...
ಮನಸು ಮೆಚ್ಚಿದ ತೊದಲ ನುಡಿಯು,
ಪ್ರೀತಿ ಕಲಿಸಿದಾ ಮೊದಲ ಹೆಣ್ಣು
ಬದುಕು ಬಯಸಿದಾ ಮೊದಲ ಕನಸು...
ಬದುಕು ಹರಸಿದ ಮೊದಲ ಗೆಳತಿ
ಮನಸ ಹರಸಿದ ಮೊದಲ ಪ್ರೀತಿ,
ಭಾವಗಳಿಗೆ ರೆಕ್ಕೆ ಕಟ್ಟಿದಾಕಿ
ಮೊದಲು ಮೂಡಿದಾ ಒಲುಮೆಯ ರೀತಿ...
ಅವಳೊಂದು ನಗುವ ಬುಗ್ಗೆ
ಬದುಕಲಿ ಭರವಸೆಯ ಚಿಲುಮೆ,
ಕೋಪವಿರದ ಮನಸು ಅವಳದು
ನೋವಲೂ ನಗುವ ಗುಣದವಳಾಕೆ...
ನನ್ನೊಳಗಿನ ಕವಿತೆಯೀಕೆ
ಕನಸಿಗೆ ಎಂದೂ ಸ್ಫೂರ್ತಿಯವಳು,
ನನ್ನೊಳಗಿನ ಒಲವ ಮನಸೇ
ಗಂಡಿನೊಳಗಿನ ಹೆಣ್ತನವೂ ನೀ...
No comments:
Post a Comment