ನೀರ ಮೇಲಿನ ಗುಳ್ಳೆ
ಬದುಕು ಇಲ್ಲಿ ಮನಸೇ,
ನಾಳೆಯೆಂಬ ಬಿಸಿಲ ಕುದುರೆ
ಏರೋ ಚಿಂತೆ ಇಂದು ಏಕೆ...
ನಾಳೆ ನಿನ್ನದಲ್ಲಾ
ಎಂಬ ಚಿಂತೆ ಯಾಕೆ,
ಇಂದು ಕೈಯಲಿರುವಾಗ
ಖುಷಿಯಿಂದ ಬಾಳಬೇಕು ಇಲ್ಲಿ...
ಬದುಕೋ ಭೂಮಿ ಕೂಡ
ಗುಂಡಗೆ ತಿರುಗುತಿಹುದು ಇಲ್ಲಿ,
ನೋವು ನಲಿವು ಎಲ್ಲಾ
ಮತ್ತೆ ಮತ್ತೆ ಬರುವುದಿಲ್ಲಿ...
ಕಳೆದು ಹೋದ ಕಾಲ
ಮತ್ತೆ ಬರದು ಎಂಬುದೊಂದು ಸತ್ಯ,
ಆದರೆ ಕಳೆದುಕೊಂಡ ನಗುವಾ
ತಿರುಗಿ ಪಡೆಯಬಹುದು ಇಲ್ಲಿ...
ನೋವಿಗೆ ಕಾರಣ ನೂರು
ನಗುವಿಗೆ ಕಾರಣ ಬೇಕಿಲ್ಲಾ,
ಬದುಕಿನ ಪಯಣ ಮೂರು ದಿನ
ನಗುವಿರಲಿ ಅಲ್ಲಿ ಪ್ರತಿದಿನ...
ಬದುಕು ಇಲ್ಲಿ ಮನಸೇ,
ನಾಳೆಯೆಂಬ ಬಿಸಿಲ ಕುದುರೆ
ಏರೋ ಚಿಂತೆ ಇಂದು ಏಕೆ...
ನಾಳೆ ನಿನ್ನದಲ್ಲಾ
ಎಂಬ ಚಿಂತೆ ಯಾಕೆ,
ಇಂದು ಕೈಯಲಿರುವಾಗ
ಖುಷಿಯಿಂದ ಬಾಳಬೇಕು ಇಲ್ಲಿ...
ಬದುಕೋ ಭೂಮಿ ಕೂಡ
ಗುಂಡಗೆ ತಿರುಗುತಿಹುದು ಇಲ್ಲಿ,
ನೋವು ನಲಿವು ಎಲ್ಲಾ
ಮತ್ತೆ ಮತ್ತೆ ಬರುವುದಿಲ್ಲಿ...
ಕಳೆದು ಹೋದ ಕಾಲ
ಮತ್ತೆ ಬರದು ಎಂಬುದೊಂದು ಸತ್ಯ,
ಆದರೆ ಕಳೆದುಕೊಂಡ ನಗುವಾ
ತಿರುಗಿ ಪಡೆಯಬಹುದು ಇಲ್ಲಿ...
ನೋವಿಗೆ ಕಾರಣ ನೂರು
ನಗುವಿಗೆ ಕಾರಣ ಬೇಕಿಲ್ಲಾ,
ಬದುಕಿನ ಪಯಣ ಮೂರು ದಿನ
ನಗುವಿರಲಿ ಅಲ್ಲಿ ಪ್ರತಿದಿನ...
 
No comments:
Post a Comment