28 November, 2018

ನೆನಪು...

ಗುದ್ದಾಡಿ ಗೆದ್ದವರಿಲ್ಲಾ
ನೆನಪುಗಳ ಜಂಜಾಟದಲಿ,
ಗೆದ್ದವರು ಕಳೆದೊದ್ರಲ್ಲಾ ಗೆಳತಿ
ಸೋತವರು ಪ್ರೇಮಿಗಳೇ ಎಲ್ಲಾ...

ನೆನಪುಗಳ ಕಾಳಗದೊಳಗೆ
ಕರಗಿ ಹೋದ ಕನಸುಗಳೆಷ್ಟೋ,
ಮಾತುಗಳೇ ಮರೆತುಹೋಗಿ
ಮೌನವಾದ ಬದುಕುಗಳೆಷ್ಟೋ...

ಒಮ್ಮೆ ಸ್ನೇಹವಾಗಿ ಮತ್ತೆ ಪ್ರೀತಿಯಾಗಿ
ಕಾಡಿದ ನೆನಪುಗಳೆಷ್ಟೋ ಗೆಳತಿ,
ಒಮ್ಮೆ ಸಿಹಿಯಾಗಿ ಮತ್ತೆ ಕಹಿಯಾಗಿ
ಜಾರಿ ಹೋದ ಕಣ್ಣೀರಿಗೆ ಲೆಕ್ಕವಿಲ್ಲಾ ಸಖೀ...

ಬದುಕು ಇಲ್ಲಿ ಚಲಿಸುವ ಮೋಡ
ನೆನಪುಗಳ ಮಳೆ ಮಿಂಚುಗಳ ಜೊತೆ,
ಕೊಚ್ಚಿ ಹೋಗಲೂಬಹುದು ಮನಸು
ನೆನಪುಗಳ ಅತಿವೃಷ್ಟಿಯಲಿ...

No comments:

Post a Comment