ಭಾರತ ಮಾತೆಯಾ ಹೆಮ್ಮೆಯ ಕುವರ
ಗಡಿಯ ಕಾಯುವಾ ಓ ಯೋಧ,
ದಿಕ್ಕು ದಿಕ್ಕುಗಳಲ್ಲೂ ಶೌರ್ಯ ಮೆರೆಯುತ್ತಾ
ಮನೆ ಮನಗಳ ಕಾಯುವ ಹಮ್ಮೀರ...
ಗಡಿಗಳಿಗೆ ಬೇಲಿಯಾಗುವ ಓ ಜೀವವೇ
ಜಾತಿ ಮತಗಳ ಹಂಗು ನಿನಗಿಲ್ಲಾ,
ಕೋಟಿ ದೇವರು ಇಲ್ಲಿದ್ದರೂ
ದೇಶವೊಂದೇ ದೇವರು ನಿನಗಿಲ್ಲಿ...
ಕೋಟಿ ಮಂತ್ರಗಳ ಭಜಿಸುತಿವೆ
ನೀನು ಕಾಯುವಾ ಜೀವಗಳು,
ಆದರೂ ನೀನು ಜಪಿಸೋ ಮಂತ್ರವೊಂದೇ
ಜಯಹೇ ಭಾರತ ಮಾತೆ...
ಹಿಮವನ್ನೇ ಹೊದ್ದು ನಿಂತರೂ ನೀ
ಬೆಚ್ಚಗೆ ಮಲಗಿಸುವೆ ನಿನ್ನವರ,
ಹೆತ್ತವ್ವನ ಹರಕೆಯ ಜೊತೆಗೆ
ಕೋಟಿ ಹಾರೈಕೆಗಳು ನಿನಗಿದೆಯಿಲ್ಲಿ...
ಸಾಮಾನ್ಯ ನೀನು ಅಸಾಮಾನ್ಯನಾಗಿ
ಬೆಳಗಿಹೆ ಶೌರ್ಯದ ದೀಪವ ತಾಯಿ ನಾಡಿಗೆ,
ನೀ ಕತ್ತಲ್ಲಲ್ಲೇ ಇದ್ದರೂ ಕೂಡ
ಸ್ವಾತಂತ್ರ್ಯದ ಬೆಳಕ ನೀಡುವೆ ನಾಡಿಗೆ...
ಗಡಿಯ ಕಾಯುವಾ ಓ ಯೋಧ,
ದಿಕ್ಕು ದಿಕ್ಕುಗಳಲ್ಲೂ ಶೌರ್ಯ ಮೆರೆಯುತ್ತಾ
ಮನೆ ಮನಗಳ ಕಾಯುವ ಹಮ್ಮೀರ...
ಗಡಿಗಳಿಗೆ ಬೇಲಿಯಾಗುವ ಓ ಜೀವವೇ
ಜಾತಿ ಮತಗಳ ಹಂಗು ನಿನಗಿಲ್ಲಾ,
ಕೋಟಿ ದೇವರು ಇಲ್ಲಿದ್ದರೂ
ದೇಶವೊಂದೇ ದೇವರು ನಿನಗಿಲ್ಲಿ...
ಕೋಟಿ ಮಂತ್ರಗಳ ಭಜಿಸುತಿವೆ
ನೀನು ಕಾಯುವಾ ಜೀವಗಳು,
ಆದರೂ ನೀನು ಜಪಿಸೋ ಮಂತ್ರವೊಂದೇ
ಜಯಹೇ ಭಾರತ ಮಾತೆ...
ಹಿಮವನ್ನೇ ಹೊದ್ದು ನಿಂತರೂ ನೀ
ಬೆಚ್ಚಗೆ ಮಲಗಿಸುವೆ ನಿನ್ನವರ,
ಹೆತ್ತವ್ವನ ಹರಕೆಯ ಜೊತೆಗೆ
ಕೋಟಿ ಹಾರೈಕೆಗಳು ನಿನಗಿದೆಯಿಲ್ಲಿ...
ಸಾಮಾನ್ಯ ನೀನು ಅಸಾಮಾನ್ಯನಾಗಿ
ಬೆಳಗಿಹೆ ಶೌರ್ಯದ ದೀಪವ ತಾಯಿ ನಾಡಿಗೆ,
ನೀ ಕತ್ತಲ್ಲಲ್ಲೇ ಇದ್ದರೂ ಕೂಡ
ಸ್ವಾತಂತ್ರ್ಯದ ಬೆಳಕ ನೀಡುವೆ ನಾಡಿಗೆ...
No comments:
Post a Comment