ನಾ ನಿನ್ನ ಮಡಿಲೊಳಗೆ
ಮಗುವಂತೆ ಮಲಗಿರಲು,
ನೀನಪ್ಪಿ ಹಿಡಿದಿರುವೆ
ಪ್ರೀತಿಯ ಒಲವ ಅಪ್ಪುಗೆಯಂತೆ...
ಓ ನೆನಪೇ ನೀನೆಷ್ಟು ಸುಂದರ
ತಾಯ ಪ್ರೀತಿಯಂತೆ ಸುಮಧುರ,
ಒಮ್ಮೊಮ್ಮೆ ನೀ ನಿಷ್ಠುರ
ಅಪ್ಪನ ಗದರುವಿಕೆಯಾ ರೀತಿ...
ಒಮ್ಮೊಮ್ಮೆ ನೀನಿಲ್ಲಿ ಸೋದರ
ಜವಾಬ್ದಾರಿಗಳಿಗೆ ಹೆಗಲಿನಂತೆ,
ಮತ್ತೊಮ್ಮೆ ನೀ ಸೋದರಿ
ವಾತ್ಸಲ್ಯದಾ ಗಣಿಯಂತೆ...
ನೀನಿಲ್ಲಿ ಪ್ರೀತಿಯಾ ಸ್ನೇಹಿತ
ತುಂಟಾಟಗಳ ಆಗರ,
ಒಮ್ಮೆ ನೀನಿಲ್ಲಿ ಅವಳ ರೀತಿ
ಸದಾ ಹಿಂಬಾಲಿಸೋ ಪ್ರೀತಿಯ ನೆರಳು...
ನೀನಿಲ್ಲದೆ ಬದುಕಿನೊಳು ಕನಸಿಲ್ಲ
ಕನಸುಗಳಿಗೆ ನೀನೇ ಎಲ್ಲಾ,
ಬದುಕಿನೊಳು ಭರವಸೆಯು ನೀ
ನಿನ್ನೆ ನಾಳೆಗಳೊಳಗಿನ ಹಪಾಹಪಿಯೂ...
ಮಗುವಂತೆ ಮಲಗಿರಲು,
ನೀನಪ್ಪಿ ಹಿಡಿದಿರುವೆ
ಪ್ರೀತಿಯ ಒಲವ ಅಪ್ಪುಗೆಯಂತೆ...
ಓ ನೆನಪೇ ನೀನೆಷ್ಟು ಸುಂದರ
ತಾಯ ಪ್ರೀತಿಯಂತೆ ಸುಮಧುರ,
ಒಮ್ಮೊಮ್ಮೆ ನೀ ನಿಷ್ಠುರ
ಅಪ್ಪನ ಗದರುವಿಕೆಯಾ ರೀತಿ...
ಒಮ್ಮೊಮ್ಮೆ ನೀನಿಲ್ಲಿ ಸೋದರ
ಜವಾಬ್ದಾರಿಗಳಿಗೆ ಹೆಗಲಿನಂತೆ,
ಮತ್ತೊಮ್ಮೆ ನೀ ಸೋದರಿ
ವಾತ್ಸಲ್ಯದಾ ಗಣಿಯಂತೆ...
ನೀನಿಲ್ಲಿ ಪ್ರೀತಿಯಾ ಸ್ನೇಹಿತ
ತುಂಟಾಟಗಳ ಆಗರ,
ಒಮ್ಮೆ ನೀನಿಲ್ಲಿ ಅವಳ ರೀತಿ
ಸದಾ ಹಿಂಬಾಲಿಸೋ ಪ್ರೀತಿಯ ನೆರಳು...
ನೀನಿಲ್ಲದೆ ಬದುಕಿನೊಳು ಕನಸಿಲ್ಲ
ಕನಸುಗಳಿಗೆ ನೀನೇ ಎಲ್ಲಾ,
ಬದುಕಿನೊಳು ಭರವಸೆಯು ನೀ
ನಿನ್ನೆ ನಾಳೆಗಳೊಳಗಿನ ಹಪಾಹಪಿಯೂ...
No comments:
Post a Comment