22 December, 2018

ಓ ಮನಸೇ...

ಬಣ್ಣವಿಲ್ಲದೆ ಗಂಧವಿಲ್ಲದೆ
ಕಾಡೋ ಮಾಯೆ ಓ ಮನಸೇ,
ಹೊತ್ತು ಇಲ್ಲದೆ ಗೊತ್ತೇ ಆಗದೆ
ಓಡೋ ಮಾಯೆ ನೀ ಮನಸೇ...

ಒಮ್ಮೆ ನೀರು ಮತ್ತೆ ಗಾಳಿಯಂತೆ
ನೀನು ಇಲ್ಲಿ ಚಂಚಲೆ ಓ ಮನಸೇ,
ತೂಕವಿಲ್ಲದ  ಆಕಾರವಿಲ್ಲದ
ಹಿಡಿಯೋಕು ಆಗದ ಮಾಯೆ ನೀನು...

ಹೆಣ್ಣು ಅಲ್ಲದಾ ಗಂಡು ಅಲ್ಲದಾ
ಭಾವ ನೀನು ಓ ಮನಸೇ,
ಹೆಣ್ಣಾಗಿ ಕಾಡುವೆ ಒಮ್ಮೆ ಇಲ್ಲಿ
ಗಂಡಾಗಿ ಕಾಯುವೆ ಮತ್ತೆ ನೀನು...

ಒಮ್ಮೆ ನೋವು ಮತ್ತೆ ನಲಿವು
ಬದುಕೆಲ್ಲಾ ನಿನ್ನ ಪರಿಹಾಸ್ಯ,
ಪ್ರೀತಿಯಲ್ಲಿ ಸ್ನೇಹದಲ್ಲಿ
ಬದುಕ ನಡೆಸುವಾ ಮಾಯೆ ನೀನು...

ಹೆಗಲಾಗು ನೀನು ಸಖನಂತೆ
ಕಾಡಬೇಡ ಕರಗೋ ಕನಸಿನಂತೆ,
ಬೇಕು ನೀನು ಪ್ರೀತಿ ತೋರುವ ಸಖಿಯಂತೆ
ಮೆರೆಸು ಇಲ್ಲಿ ನನ್ನೆದೆಯೊಳಗೆ ನೆನಪುಗಳ ಸಂತೆ...

No comments:

Post a Comment