02 December, 2018

ಜನ್ಮ...

ನಾನಂದು ಅತ್ತಿದ್ದೆ ಕತ್ತಲೆಯೊಳಗೆ
ಜಗವೆಲ್ಲಾ ನಕ್ಕಿತ್ತು ಬೆಳಕಿನೊಳಗೆ,
ಬ್ರಹ್ಮ ಬರೆದ ಅನುಬಂಧ
ಯಾರು ತಿಳಿಯದಂತೆ ಶುರುವಾಗಿತ್ತು...

ಯಾವ ಲೋಕದಾ ಪಯಣ
ಅಲ್ಲಿ ಅಂದು ಮುಗಿದಿತ್ತೋ,
ಭೂಮಿಯ ಮೇಲಿನ ಯಾತ್ರೆ
ಇಲ್ಲಿ ಹೊಸತಾಗಿ ಆರಂಭವಾಗಿತ್ತು..

ಮತ್ತೆಂದೂ ಅಳಲಿಲ್ಲಾ ನಾ ಕತ್ತಲೆಯೊಳಗೆ
ಜಗವಿಲ್ಲಿ ನಗಲೂ ಇಲ್ಲ ನನಗಾಗಿ,
ನಾನು ನಕ್ಕಾಗ ನನ್ನೊಡನೆ ನಕ್ಕಿತ್ತು
ನಾನು ನೋವೆಂದಾಗ ಅತ್ತಿತ್ತು ಅಲ್ಲೊಂದು ಹೃದಯಾ..

ಭೂಮಿಯಾ ಮೇಲಿನ ಪಯಣಕ್ಕೆ
ಮೊದಲ ಸಹ ಪ್ರಯಾಣಿಕಳು ಅವಳೇ,
ಮಧುರ ಬಾಂಧವ್ಯಕೆ ಮುನ್ನುಡಿಯು ಇವಳಿಲ್ಲಿ
ಕರುಳಿನ ಈ ಬಂಧ ಕಣ್ಣೀರಿನ ಸಂಬಂಧ...

ಅವಳಿಗಾಗಿ ನಗಲಿಲ್ಲಾ ನನಗಾಗಿಯೇ ಎಲ್ಲಾ
ನನ್ನ ನಗುವಲ್ಲೇ ಕಂಡಳೂ ಜಗವನ್ನೇ,
ಮುಂದಿನಾ ಪಯಣ ನನಗಂತೂ ತಿಳಿದಿಲ್ಲಾ
ಇದ್ದರೇ ಇರಲಿ ಈ ಗರ್ಭದೊಳಗೆ ಮುಂದೊಂದು ಜನ್ಮ...

No comments:

Post a Comment