ಸತ್ತು ಗೋರಿ ಸೇರಿದ
ಭಾವನೆಗಳಿಗೆಲ್ಲಾ
ಜೀವ ಬರುವುದಾದರೆ,
ನಾನು
ಮತ್ತೆ
ಪ್ರೀತಿಸಬೇಕು
ನಿನ್ನನೇ...
**********
ನೀನೆನ್ನ ಮರೆತರೂ
ಮರೆತಿರಬಹುದು,
ಅಳಿಸಲಾರದೆ
ತೊಳಲಾಡುತಿರುವೆ
ಹುಡುಗಿ
ನೀ
ನನ್ನೆದೆಯಲಿ
ಗೀಚಿರುವ ಒಲವಿನೋಲೆಯ.
**********
ನೀ ಇರದಿದ್ದರೇನಂತೆ
ನಾನೆಂದೂ ಪ್ರೇಮಿಯೇ
ನಿನ್ನ ನೆನಪಿಗಾಗಿ ಅಲ್ಲ
ಪ್ರೀತಿಗಾಗಿಯೂ ಅಲ್ಲ,
ನನ್ನ ಕನಸಿಗಾಗಿ
ನಾಳೆಯ ಸುಂದರ
ಬದುಕಿಗಾಗಿ.
ನಾಳೆಯ ಸುಂದರ
ReplyDeleteಬದುಕಿಗಾಗಿ.
ಎನ್ನುವ ಆಶಯ ಜೀವನ್ಮುಖಿಯಾಗಿದೆ.
ಪ್ರೀತಿಗೆ ಎಂದೂ ಸಾವಿಲ್ಲ, ಅದು ಅಜರಾಮರ; ಅರಿತು ಬೆರೆತು ಒಂದಾದರೆ ಜೀವನ ರಸಮಯ ಕ್ಷಣ.
ReplyDeletethank u both of u sir
ReplyDelete