09 September, 2013

ದೂರಾದ ಹುಡುಗಿಗೆ...



ಸತ್ತು ಗೋರಿ ಸೇರಿದ
ಭಾವನೆಗಳಿಗೆಲ್ಲಾ
ಜೀವ ಬರುವುದಾದರೆ,
ನಾನು
ಮತ್ತೆ
ಪ್ರೀತಿಸಬೇಕು
ನಿನ್ನನೇ...

**********

ನೀನೆನ್ನ ಮರೆತರೂ
ಮರೆತಿರಬಹುದು,
ಅಳಿಸಲಾರದೆ
ತೊಳಲಾಡುತಿರುವೆ
ಹುಡುಗಿ
ನೀ
ನನ್ನೆದೆಯಲಿ
ಗೀಚಿರುವ ಒಲವಿನೋಲೆಯ.

**********

ನೀ ಇರದಿದ್ದರೇನಂತೆ
ನಾನೆಂದೂ ಪ್ರೇಮಿಯೇ
ನಿನ್ನ ನೆನಪಿಗಾಗಿ ಅಲ್ಲ
ಪ್ರೀತಿಗಾಗಿಯೂ ಅಲ್ಲ,
ನನ್ನ ಕನಸಿಗಾಗಿ
ನಾಳೆಯ ಸುಂದರ
ಬದುಕಿಗಾಗಿ.

3 comments:

  1. ನಾಳೆಯ ಸುಂದರ
    ಬದುಕಿಗಾಗಿ.
    ಎನ್ನುವ ಆಶಯ ಜೀವನ್ಮುಖಿಯಾಗಿದೆ.

    ReplyDelete
  2. ಪ್ರೀತಿಗೆ ಎಂದೂ ಸಾವಿಲ್ಲ, ಅದು ಅಜರಾಮರ; ಅರಿತು ಬೆರೆತು ಒಂದಾದರೆ ಜೀವನ ರಸಮಯ ಕ್ಷಣ.

    ReplyDelete