20 February, 2014

** ಅಂತಃಕಲಹ **



ನಿದಿರೆಯಿಲ್ಲದ ಕಂಗಳಿಗೆ
ಕನಸು ದೂರಾದಂತೆ
ನಿರಾಸೆ ತುಂಬಿದ ಮನಸೊಳಗೆ
ಭಾವನೆಗಳು ಮರೆಯಾಗುತಿವೆ.

**********

ಚಿಂತೆಯೊಂದು ಚಿತೆಯಾಗಿರಲು
ನೂರು ಕನಸುಗಳ
ಜೊತೆಯಿದ್ದರೇನು
ಉರುವಲುಗಳಾಗಿ
ಉರಿದು ಹೋಗುತಿಹವು
ಬದುಕ ಭರವಸೆಗಳೆಲ್ಲವೂ.

**********

ಮನಸು ಮನಸೊಳಗೆ
ದ್ವೇಷವದು ತುಂಬಿರಲು
ಹೂವು ಕೂಡ ಹಾವಾಗಬಹುದು
ನಂಬಿಕೆಯ ಮಾತೆಲ್ಲಿ ಬಂತು
ಅನುಮಾನದ ಬದುಕಲ್ಲಿ.

2 comments: