ಆದಿಶಕ್ತಿಯ ಅಂಶಯಿವಳು
ಯೋಗ ಮಾಯೆಯಾ ತಂಗಿಯಿವಳು
ಮಾಯೆಯೆಂದೇ ಮೊದಲು ಪೂಜಿಸುವೆ
ಓ ಸ್ತ್ರೀ ಶಕ್ತಿರೂಪಿಣಿಯೇ.
ತಾಯಿಯಾಗಿ ಜಗವ ಪೊರೆವೆ
ಮಮತಾಮಯಿ ನೀ ಓ ಪ್ರೀತಿಯ ಕಡಲೇ
ಕೋಟಿ ಕೊಟ್ಟರೂ ಕೊಳ್ಳಲಾಗದು ನಿನ್ನ ಒಲವನು
ಋಣವನೆಂದೂ ತೀರಿಸಲಾರೆ ಓ ಮಾತೃದೇವತೆಯೇ.
ಸಹೋದರಿಯಾಗಿ ಮತ್ತೆ ಜೊತೆಯಾಗುತ
ಪ್ರೀತಿಯಲಿ ಒಡಲ ತುಂಬುವೆ
ಮೊದಲ ಸ್ನೇಹಿತೆ ನೀನೇ ಎಂದಿಗೂ
ಈ ಮನುಜ ಜೀವಿಗೆ.
ಮಡದಿಯಾಗಿ ಕೈಯ ಹಿಡಿಯುವೆ ಯೌವನಕೆ
ತಾಯ ಪ್ರೀತಿಯ ತೋರಿ ನಿಲ್ಲುತಾ
ಬಾಳು ಬೆಳಗುವೆ ಉಸಿರಿಗೆ ಉಸಿರಾಗಿ
ಕೊನೆಯವರೆಗೂ ಜೊತೆಯಾಗಿ ನಿಲ್ಲುವಾ ವಾಗ್ದೇವಿಯಾಗುವೆ.
ಮಗಳಾಗಿ ಬರುವೆ ನೀನು ಮತ್ತದೇ ಪ್ರೀತಿಗೆ
ಕೊಟ್ಟ ಪ್ರೀತಿಯ ಮರಳಿ ಪಡೆಯುವಾ ಹಂಬಲದಂತೆ
ಮಗುವಾಗಿ ನಲಿದು ಗೆಳತಿಯಂತೆ ಜೊತೆಯಾಗಿ ನಿಲ್ಲುವೆ
ಮುಗ್ಧತೆಯಲಿ ಮೈ ಮರೆಸುತಾ ಜೀವನ ಪಾಠ ಕಲಿಸುವೆ.
ಸೃಷ್ಟಿಯ ಪೊರೆವ ಓ ದೈವ ಶಕ್ತಿಯೇ
ಪ್ರಕೃತಿಯಾಗಿ ಬಾಳ ಬೆಳಗುವ ನಿತ್ಯ ಚೇತನವೇ
ಮಾಯೆಯೆನ್ನದೆ ಹೇಗೆ ಹೊಗಳಲಿ
ಓ ದೈವಸ್ವರೂಪಿಣಿಯೇ.
No comments:
Post a Comment