14 April, 2014

**ಹನಿ ಹನಿ ಪ್ರೀತಿಗೆ**



ನೀನೊಪ್ಪಿ
ಅಪ್ಪಿಕೊಂಡಾಗ
ಸ್ವರ್ಗಕ್ಕೆ ಮೂರೇ ಗೇಣು,
ಹೃದಯವದು
ಮಿಡಿಯುತ್ತಿತ್ತು
ಒಲವಿದುವೇ
ಪಂಚಮವೇದವೆಂದು.

**********

ಅಕ್ಷರಗಳ ಹೆಕ್ಕಿ
ಪದಗಳ ಪೋಣಿಸಿದೆ
ಒಲವಿನ ಹಾರವಿದು
ನಿನಗಾಗಿ ಕಾಯುತಿದೆ
ಧರಿಸಿ ನಸುನಗೆಯ ಬೀರು
ಓ ಒಲುಮೆಯ ಚಿಲುಮೆಯೇ.

**********

ಬರೆದಿದ್ದು
ನಿನ್ನ ಪ್ರೀತಿಗೆ
ಅರಳಿದ್ದು
ಮಾತ್ರ ನನ್ನ
ಭಾವ ಕುಸುಮ
ನಿನ್ನೊಲವ
ರಾಶಿ ಕನಸಿಗೆ.

No comments:

Post a Comment