28 April, 2014

ನನ್ನೆದೆಯಾ ಹಾಡು...



ಪ್ರತಿ ಕವನವ ಬರೆಯುವೆ
ನಿನ್ನ ಹೆಸರಿಗೆ ಗೆಳತಿ,
ಪದಗಳ ಹಂದರವಲ್ಲ ಅವು
ನನ್ನೊಳಗಿನ ಭಾವಸಂಗಮ.

ಪದಗಳ ಪೋಣಿಸುವ
ಚತುರ ನಾನಲ್ಲ ಹುಡುಗಿ,
ಕನಸುಗಳ ಬೆಸೆದಿರುವೆ
ನಾ ಪದಗಳ ಮರೆಯಲ್ಲಿ.

ಅಕ್ಷರಗಳ ಮಾಲೆ ಜೋಡಿಸಿರುವೆ
ನಿನ್ನ ಎದುರಲ್ಲೇ ಗೆಳತಿ,
ಬರಿಯ ಅರ್ಥವ ಹುಡುಕದಿರು
ನೀ ನನ್ನ ಕನಸುಗಳ ಗರ್ಭದೊಳಗೆ.

ಪ್ರಾಸಗಳ ನಿರೀಕ್ಷಿಸಬೇಡ ಗೆಳತಿ
ನೀ ಎನ್ನ ಕವನದೊಳಗೆ,
ಭಾವನೆಗಳ ಬಂಧಿಸಿರುವೆ
ಈ ಒಲವ ಭಾಷೆಯಲಿ.

ವಿಮರ್ಷಿಸಿ ನೋಡು ಈ ಕಾವ್ಯಗಳ
ಪ್ರೀತಿಯ ಪರಿಧಿಯೊಳಗೆ,
ಗೆಳತಿ ಕಂಡರೂ ಕಾಣಬಹುದು ನಿನಗೆ
ಈ ಜೀವದ ಒಲವ ಮೊರೆತವಿಹುದಲ್ಲಿ.

2 comments: