ಮಾಸದ ಕಲೆಗಳಿಗೂ
ನಿನ್ನ ನೆನಪ
ನೆಪವನ್ನಿತ್ತಿದ್ದೇನೆ
ಗೆಳತಿ,
ಕಲೆಗಳೀಗ ಸುಂದರ
ಮನಸು ಮಾತ್ರ
ನಿನ್ನ
ನೆನಪುಗಳ ಹಂದರ.
**********
ನನ್ನ
ನೆನಪುಗಳ
ಮೆರವಣಿಗೆಗೆ
ನೀನು ಸಾರಥಿಯೂ,
ಜನುಮ ಜನುಮದ
ಪ್ರೀತಿಗೆ
ನೀನು ಒಲವಿನ
ಆರತಿಯೂ.
**********
ಪ್ರೀತಿಗಿದು
ಬಾಷ್ಯ
ನಿನ್ನ ಹೆಸರು,
ಒಲವಿಗಿದೆ
ಭಾಷೆ
ಅದೆನ್ನ ಉಸಿರು.
3ಊ ಚೆನ್ನಾಗಿವೆ.
ReplyDelete'ನನ್ನ
ನೆನಪುಗಳ
ಮೆರವಣಿಗೆಗೆ
ನೀನು ಸಾರಥಿಯೂ'
ಸೂಪರ್ರೂ...
thank u sir
Delete