08 December, 2025

ಕಾರಣವೂ ಬೇಕೇ...

ಮುಂಜಾನೆ ನಗುವ ಮನಸೇ 
ಮುಸ್ಸಂಜೆಯಾದರೆ ಕನಸೇ,
ಹಗಲೆಲ್ಲ ಸುತ್ತಾಡಿ ಬರುವೇ 
ಸಂಜೆಗೆ ಒರಗೋಕೆ ಬೇಕೊಂದು ಭುಜವೇ...

ಖುಷಿಯ ನಡುವೆ ಒಮ್ಮೆ ಮೌನ
ಅಳುವಿನ ಜೊತೆಗೊಮ್ಮೆ ಧ್ಯಾನ,
ಅಂಟಿದೆ ಒಂಟಿತನದ ತಾಪ 
ಬದುಕಲ್ಲಿ ಬಯಸಿ ಪಡೆದ ಶಾಪ...

ಮಿಂಚು ಕಂಗಳ ತುಂಬಾ 
ಬರೀಯಾ ನೀಲ ನೀಲ ಕನಸು,
ಸಾಗರಕೂ ಪೈಪೋಟಿ ಏನೋ
ಆಳ ಅಗಲ ತಿಳಿಯಲಾಗದ ವೇಗ...

ಬರಿದು ಕಾರಣವೂ ಈಗ 
ಬದುಕಿಲ್ಲಿ ನಗದೇ ಇರಲು,
ಮನಸೇ ನೀನು ಮಗುವಂತೆ ಇರಲು 
ಪ್ರೀತಿಯೇ ಹುಡುಕುತ್ತಾ ಬರದೇ...

No comments:

Post a Comment