18 July, 2012

**ಗೆಳೆಯ**



ಸ್ನೇಹಕ್ಕೆ ಹೆಸರು ನೀನು,
ಪ್ರೀತಿಗೆ ಅರ್ಥವೂ ನೀನು,
ಭಾವ ಸಿಂಧುವು ನೀನು,
ನನ್ನಂತರಾಳದ ನಲಿವು ನೀನು.

ಯಾವ ಜನ್ಮದ ಮೈತ್ರಿಯೋ,
ನಿನ್ನ ಪ್ರೀತಿ ಸ್ನೇಹದ ಬಂಧವೋ,
ಜನ್ಮ ಬಂಧುವು ನೀನು,
ಪೂರ್ವ ಜನ್ಮದ ಫಲವು ನೀನು.

ಸ್ನೇಹವಿದು ಬಂಧಿಸಿಹುದು ಕಾಲನ ಗರಡಿಯಲಿ,
ಪ್ರೀತಿಯಿದು ತೇಲಿಸಿಹುದು ಈ ದಿವ್ಯ ಮೈತ್ರಿಯಲಿ,
ದೂರದ ತೀರ ನೀನು, ದಡದಂಚಿನ ನೀರಾಗಲೇನು,
ನಿನ್ನ ಸ್ನೇಹದ ಕಡಲಿನ ಪಯಣಿಗ ನಾನಾಗಲೇನು.

ಪ್ರೀತಿಯಿಹುದು,ಸ್ನೇಹವಿಹುದು,ಜೊತೆಯಲೇ ಸಾಗುವ ಬಯಕೆಯಿಹುದು,
ಕನಸಿಗೆ ಜೀವ ತುಂಬಿದ ಚೇತನ ನೀನು,
ಸ್ನೇಹದ ಅನಂತ ಪರಿಧಿಯು ನೀನು,
ಆ ಸ್ನೇಹದ ಸಣ್ಣ ಬಿಂದುವಾಗಲೇನು.

ಸ್ವರ್ಗಲೋಕದ ಕನಸೆಲ್ಲಿಯದು ಗೆಳೆಯಾ,
ಸದಾ ನಿನ್ನ ಸ್ನೇಹದಾಮೃತವೊಂದಿರೆ ಸಾಕು,
ಈ ಜಗದಿ ನಿನ್ನ ಸ್ನೇಹಕೆ ಮಿಗಿಲಾದುದು ಯಾವುದು?
ಜನ್ಮ ಜನ್ಮಗಳಿಗೂ ನಿನ್ನ ಸ್ನೇಹದ ಸವಿಯೊಂದಿದ್ದರೆ ಸಾಕು ನನಗೆ.

ಪ್ರತಿ ಕನಸಲ್ಲೂ ನಿನ್ನ ಸ್ನೇಹವಿದೆ ಜೊತೆಗೆ,
ಪ್ರತಿ ಮಿಡಿತವೂ ತುಡಿಯುತಿದೆ ನಿನ್ನ ಹೆಸರ ನನ್ನಂತರಂಗದಲಿ,
ಜನ್ಮ ಜನ್ಮಾಂತರದ ಬಂಧುವಾಗು ನೀ,
ಈ ಸ್ನೇಹ ಸಾಗರದ ಬಿಂದುವಾಗಿರುವೆ ನಾನೆಂದೂ...

No comments:

Post a Comment