ಮನಸಿಂದು ಖಾಲಿ ಹಾಳೆಯಾಗಿದೆ,
ತುಂಬಬೇಕಿದೆ ಅದನಿಂದು,
ಭಾವಗಳ ಮೇಲೆ ಭಾವನೆಯ ಚೆಲ್ಲಿ.
ಬರೆಯಬೇಕಿದೆ ಇಂದು ಕನಸಿನ ಕವನ,
ಕನಸಿನ ಲೋಕದ ಜಾಡು ಹಿಡಿದು,
ಬದುಕಿನ ಪುಟದ ಸವಿ ನೆನಪುಗಳ ತೆಗೆದು.
ಮರೆಯಬೇಕಿದೆ ಇಂದು ನೋವಿನ ಕಥೆಯಾ,
ನಾಳೆಯ ಹೊಸತನದ ಬದುಕ ನೆನೆದು,
ನಾಳೆಗಳ ನಾಳೆಯ ಪ್ರೀತಿಸುತ್ತಾ...
ಬದುಕಬೇಕಿದೆ ಇಲ್ಲಿ ಸ್ನೇಹ ಬೆಳೆಸುತ್ತಾ,
ಜೀವನದ ಕನಸುಗಳ ಪೋಣಿಸುತ್ತಾ,
ಕನಸ ನನಸಾಗಿಸುವ ಹೆಜ್ಜೆಯಿಡುತ್ತಾ...
ತುಂಬಬೇಕಿದೆ ಅದನಿಂದು,
ಭಾವಗಳ ಮೇಲೆ ಭಾವನೆಯ ಚೆಲ್ಲಿ.
ಬರೆಯಬೇಕಿದೆ ಇಂದು ಕನಸಿನ ಕವನ,
ಕನಸಿನ ಲೋಕದ ಜಾಡು ಹಿಡಿದು,
ಬದುಕಿನ ಪುಟದ ಸವಿ ನೆನಪುಗಳ ತೆಗೆದು.
ಮರೆಯಬೇಕಿದೆ ಇಂದು ನೋವಿನ ಕಥೆಯಾ,
ನಾಳೆಯ ಹೊಸತನದ ಬದುಕ ನೆನೆದು,
ನಾಳೆಗಳ ನಾಳೆಯ ಪ್ರೀತಿಸುತ್ತಾ...
ಬದುಕಬೇಕಿದೆ ಇಲ್ಲಿ ಸ್ನೇಹ ಬೆಳೆಸುತ್ತಾ,
ಜೀವನದ ಕನಸುಗಳ ಪೋಣಿಸುತ್ತಾ,
ಕನಸ ನನಸಾಗಿಸುವ ಹೆಜ್ಜೆಯಿಡುತ್ತಾ...
No comments:
Post a Comment