23 July, 2012

ಕನಸುಗಳ ಚಿತ್ತಾರ.....




ಪ್ರೀತಿ ಬರೆದ ಈ ಹೊಸ ಭಾಷ್ಯಕೆ ಇಂದು ನೀನು ಹೆಸರಾದೆ,
ಈ ಒಲವ ಮುನ್ನುಡಿಗೆ ಹೊಸ ಕನಸ ಪೊಣಿಸಿದೆ...

ಪ್ರತಿ ಉಸಿರಿನ ಕಣ ಕಣವು ನಿನ್ನ ಕೂಗಿದೆ,
ಈ ತನುವಿನ ಅಣು ಅಣುವು ನಿನ್ನ ಸನಿಹ ಬೇಡಿದೆ...

ಜನುಮ ಜನುಮದ ಈ ನಂಟಿಗೆ ಮಾತು ಸೋತಿದೆ,
ಕಣ್ಣಂಚಿನ ಆ ಭಾವವು ಮೌನ ಮೆರೆಸಿದೆ...

ಒಲವ ರಾಗ ಶೃತಿಸೇರಿ ಮಧುರ ಗಾನವಾಗಿದೆ,
ನಿನ್ನಿರುವಿನಲ್ಲಿ ನನ್ನ ಮನಸು ಹಾರೊ ಚಿಟ್ಟೆಯಾಗಿದೆ...

ಎಲ್ಲೋ ಇದ್ದ ನೀನು ನನ್ನ ಮನದ ಗೂಡು ಸೇರಿದೆ,
ಈ ಕನಸುಗಾರನ ಹೊಸ ಕನಸಿಗಿಂದು ನಾಂದಿ ಹಾಡಿದೆ...

ಪ್ರೇಮಿಯ ಹೃದಯದ ವೀಣೆಯನ್ನು ನೀನು ಮೀಟಿದೆ,
ಕನಸುಗಾರನ ಕನಸುಗಳಿಂದು ಪ್ರೇಮಕಾವ್ಯವಾಗಿದೆ...

ನೂರು ವರುಷ ಬಾಳೊ ಆಸೆ ನನ್ನದಲ್ಲವೆ,
ನಿನ್ನ ಪ್ರೀತಿ ನನ್ನ ಮರೆಸೊ ಕ್ಷಣವು ಸಾಕದೆ...

ಬಣ್ಣ ಬಣ್ಣದ ಕನಸಿಗೆ ಹೊಸ ರಂಗು ನೀನಾದೆ,
ಕನಸುಗಳ ಚಿತ್ತಾರ ಬಿಡಿಸೊ ಕುಂಚವು ನಾನಾದೆ...

ಕಂಡ ಕನಸು ನನಸಾದ ಖುಷಿಯಿಂದು ನನಗಿರೆ,
ಕೇಳು ನೀನು ನನ್ನೇ ಕೊಡುವ ಪ್ರೀತಿಯಾಣೆ ಇಲ್ಲಿದೆ...

ಪ್ರತಿ ಕ್ಷಣವು ಜೊತೆಯಾಗಿರೊ ಆಶಯವಿಲ್ಲಿದೆ,
ಉಸಿರಲ್ಲಿ ಉಸಿರಾಗಿರೊ ಈ ಪ್ರೀತಿ ನಿನ್ನದೇ...


No comments:

Post a Comment