19 July, 2012

ಮನಸಾದೆ ನೀನು....

ಎಂದೋ ಬರೆದಾಯ್ತು ನಿನ್ನ ಹೆಸರ ನನ್ನೆದೆಯಾ ಗೂಡಲ್ಲಿ,
ಮನಸಾದೆ ನೀನು,ಕನಸಾದೆ ನೀನು ನನ್ನೊಲವೆ,
ನೀ ಕಾಡದ ಕ್ಷಣಗಳಿಲ್ಲ,ನನ್ನ ಮನಸೆಳೆಯದ ದಿನವಿಲ್ಲ,
ಸದಾ ಮೌನಿ ನೀನು ಆದರೂ ತುಂಟಿನೇ ದೂರಾನೇ ನಿಂತು ಮಾಡಿದೆಯಲ್ಲೇ ಮನಸ ಈ ಪರಿ
ನಿನಗಾಗಿ ಸೋಲಲಿಲ್ಲ ನಲ್ಲೇ ಸೋತೆ ನೀನು ಪ್ರೀತಿಸುವ ಪರಿಗೆ,
ಇನ್ನೆಷ್ಟು ದಿನ ನಿನ್ನ ಅಜ್ಞಾತವಾಸ?
ಬೇಗನೆ ಬಂದು ನನ್ನ ಸೆರೆಯಾಗಿ ನುಡಿಯಬಾರದೆ ನಲ್ಲ ನಾನಿಲ್ಲೇ ಇರುವೆನೆಂದು,
ಹಿಡಿದಿಟ್ಟೆ ನಾ ನಿನ್ನೆನ್ನ ಹೃದಯಮಂದಿರದಲ್ಲಿ ಮನಸ್ಸಿಂದು ಬಯಸಿಹುದು ನಿನ್ನೆನ್ನ ಬಾಹುಬಂಧನದಲ್ಲಿ...

No comments:

Post a Comment